ರೈತರಿಗೆ ಗುಡ್ ನ್ಯೂಸ್! PM ಕಿಸಾನ್ 23ನೇ ಕಂತಿನ ₹2000 ಬಿಡುಗಡೆ, ನಿಮ್ಮ ಖಾತೆಗೆ ಬಂದಿದೆಯೇ? PM Kisan 23rd Installment Date 2026

PM Kisan 23rd Installment Date 2026: PM ಕಿಸಾನ್ 23ನೇ ಕಂತು ಜಮಾ: ನಿಮ್ಮ ಖಾತೆಗೆ ಹಣ ಬಂದಿದೆಯೇ? 2 ನಿಮಿಷದಲ್ಲಿ ಪರಿಶೀಲಿಸಿ

ಕೇವಲ ಕರ್ನಾಟಕದ ರೈತರು ಮಾತ್ರವಲ್ಲದೇ ಭಾರತದ ಕೋಟ್ಯಾಂತರ ರೈತರು ಬಹುದಿನದಿಂದ ಕಾಯುತ್ತಿದ್ದ pm Kisan 23ನೇ ಕಂತು ಕುರಿತಾದ ಒಂದು ಮಹತ್ವದ ಸುದ್ದಿ ಹೊರ ಬಂದಿದೆ. ನಮ್ಮ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan Yojana) ಯೋಜನೆಯ ಮೂಲಕ ಭಾರತದಲ್ಲಿ ಇರುವಂತ ರೈತರ ಬ್ಯಾಂಕ್ ಖಾತೆಗೆ 2000 ಹಣ ನೇರವಾಗಿ ಜಮಾವಣೆಯಾಗುತ್ತದೆ. ಈಗಾಗಲೇ 22 ಕಂತುಗಳ ಹಣವನ್ನು ಕೇಂದ್ರ ಸರ್ಕಾರ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದು ಈಗ 23ನೇ ಕಂತು ಯಾವಾಗ ಬರುತ್ತದೆ ಎಂದು ರೈತರು ಕಾಯುತ್ತಿದ್ದರು ಈ ಕುರಿತು ಪಿಎಂ ಮೋದಿಯವರು ಮಹತ್ವದ ಘೋಷಣೆಯನ್ನು ಹೊರಹಾಕಿದ್ದಾರೆ ಈ ಕುರಿತು ಸಂಪೂರ್ಣ ಮಾಹಿತಿಯನ್ನು ಕೆಳಗಿನಂತೆ ವಿವರಿಸಲಾಗಿದೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಈ ಯೋಜನೆಯ ಮೂಲಕ ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ 2000 ದಂತೆ ವರ್ಷಕ್ಕೆ ಒಟ್ಟು 6,000 ಹಣವನ್ನು ಒಂದು ವರ್ಷಕ್ಕೆ ರೈತರಿಗೆ ನೀಡಲಾಗುತ್ತದೆ. ಈ ಯೋಜನೆ ಮೂಲಕ ಸುಮಾರು 9.44 ಕೋಟಿ ರೈತರ ಬ್ಯಾಂಕ್ ಖಾತೆಗೆ ಒಟ್ಟು 18,880 ಕೋಟಿ ಹಣವನ್ನು ಜಮಾ ಮಾಡಲಾಗುತ್ತದೆ ಎಂದು ಮೂಲ ವರದಿಗಳ ಮೂಲಕ ತಿಳಿದು ಬಂದಿದೆ. ಈ ಯೋಜನೆಯ ಉದ್ದೇಶ ರೈತರ ಆದಾಯವನ್ನು ಹೆಚ್ಚಿಸುವುದು ಹಾಗೂ ಇದರಿಂದ ರೈತರು ತಮ್ಮ ಕೃಷಿ ಚಟುವಟಿಕೆ ಈ ಹಣವು ಬಳಸಿಕೊಳ್ಳಲು ಉಪಯೋಗವಾಗಲಿ ಎಂಬುದೇ ಇದರ ಮೂಲ ಉದ್ದೇಶವಾಗಿದೆ.

Pm Kisan 23rd installment date 2026 official update

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 20 ಜೂನ್ 2026ರಂದು ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 23ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ. ಈ ಕಂತಿನ ಹಣವು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಅಂದರೆ DBT ಮೂಲಕ ಜಮಾ ಆಗುತ್ತದೆ.

WhatsApp Channel Join Now
Telegram Group Join Now

ಈ ಯೋಜನೆಯ ಮೂಲಕ ಅರ್ಹತೆ ಪಡೆದ ರೈತರಿಗೆ 2000 ಹಣ ದೊರೆಯಲಿದೆ, ಆದ ಕಾರಣ ಎಲ್ಲಾ ರೈತರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಹಾಗೂ e-kyc ಆಗಿದೆ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ಖಾತೆಗೆ ಹಣವು ಜಮಾವಾಗುವುದಿಲ್ಲ.

PM Kisan Yojana ಎಂದರೇನು?

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಕೇಂದ್ರ ಸರ್ಕಾರವು 2019ರಲ್ಲಿ ಪ್ರಾರಂಭಿಸಿತು. ಈ ಯೋಜನೆಯ ಮೂಲಕ ಅರ್ಹತೆ ಪಡೆದ ರೈತರಿಗೆ ವರ್ಷಕ್ಕೆ ಸುಮಾರು 6000 ಆರ್ಥಿಕ ನೆರವು ನೀಡುತ್ತಾ ಬಂದಿದೆ ಈ ಮತವನ್ನು ಕಂತುಗಳಾಗಿ ವಿಂಗಡಿಸಿದೆ ಅಂದರೆ ವರ್ಷಕ್ಕೆ ಮೂರು ಬಾರಿ ಇದನ್ನು ಇನ್ನಷ್ಟು ಸರಳವಾಗಿ ಹೇಳುವುದಾದರೆ ಪ್ರತಿ 4 ತಿಂಗಳಿಗೆ ಒಂದು ಸಾರಿ 2000 ಹಣ ಜಮವಾಗುತ್ತದೆ.

ಈ ಯೋಜನೆಯ ಪ್ರಮುಖ ಉದ್ದೇಶ:
• ಬಡ ರೈತರ ಆರ್ಥಿಕ ಸ್ಥಿತಿ ಸುಧಾರಿಸುವುದು
• ರೈತರ ಕೃಷಿ ವೆಚ್ಚಗಳನ್ನು ನಿರ್ವಹಿಸಲು ನೆರವು ನೀಡುವುದು
• ಗ್ರಾಮೀಣ ಪ್ರದೇಶಗಳಲ್ಲಿ ಆದಾಯದ ಭದ್ರತೆ ಒದಗಿಸುವುದು
• ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ನೇರ ಹಣಕಾಸು ಸಹಾಯ ನೀಡುವುದು

PM Kisan 23rd installment ಪಡೆಯಲು ಯಾರು ಅರ್ಹರು?

23ನೇ ಕಂತಿನ ಹಣ ಪಡೆಯಲು ರೈತರು ಈ ಕೆಳಗಿನ ಅರ್ಹತೆಯನ್ನು ಹೊಂದಿರಲೇಬೇಕು ಅವುಗಳೆಂದರೆ?

1. Pm-Kishan ಯೋಜನೆಯಲ್ಲಿ ರೈತರು ನೋಂದಣಿ ಮಾಡಿಸಬೇಕು
2. ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು
3. ರೈತರ ಭೂ ದಾಖಲಾತಿಗಳು Pm-Kishan ಯೋಜನೆಯಲ್ಲಿ ನೋಂದಾಣಿ ಆಗಿರಬೇಕು.
4. ಕಡ್ಡಾಯವಾಗಿ e-kyc ಪೂರ್ಣಗೊಂಡಿರಬೇಕು
5. ಸರ್ಕಾರ ನಿಗದಿಪಡಿಸಿದ ಅರ್ಹತ ನಿಯಮಗಳಿಗೆ ಅನುಗುಣವಾಗಿರಬೇಕು

PM Kishan ಗೆ e-KYC ಕಡ್ಡಾಯವೇ?

ಹೌದು, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಎಲ್ಲಾ ಫಲಾನುಭವಿ ರೈತರು ಕಡ್ಡಾಯವಾಗಿ e-kyc ಮಾಡಿಸಬೇಕು. E-kyc ಇಲ್ಲದ ರೈತರಿಗೆ ಯಾವುದೇ ಕಾರಣಕ್ಕೂ ಈ ಯೋಜನೆ ಲಾಭ ದೊರೆಯುವುದಿಲ್ಲ. E-kyc ಮಾಡಿಸಲು ನಿಮ್ಮ ಹತ್ತಿರದ CSC ಕೇಂದ್ರ ಹಾಗೂ Grama One ಸೇವಾ ಕೇಂದ್ರಕ್ಕೆ ಭೇಟಿ ಮಾಡಿದ ಮೂಲಕ e-KYC ಸುಲಭದಲ್ಲಿ ಮಾಡಿಸಬಹುದು.

Pm Kishan beneficiary status check ಹೇಗೆ ಮಾಡುವುದು?

ರೈತರು ತಮ್ಮ 23ನೇ ಕಂತಿನ ಹಣ ನಮ್ಮ ಬ್ಯಾಂಕ್ ಖಾತೆಗೆ ಬಂದಿದೆ ಅಥವಾ ಬಂದಿಲ್ಲವೇ ಎಂಬುದನ್ನು ಸುಲಭವಾಗಿ ಪರಿಶೀಲಿಸಬಹುದು ಅದು ಹೇಗಂದರೆ ನಾವು ಹೇಳುವ ಈ ಕೆಳಗಿನ ಎಲ್ಲಾ ಕ್ರಮಗಳನ್ನು ಅನುಸರಿಸಿ.

1. Pm Kishan ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
2. Know your status ಎಂಬ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಿ
3. ತದನಂತರ ಆಧಾರ್ ಕಾರ್ಡ್ ಸಂಖ್ಯೆಗೆ ಲಿಂಕ್ ಆಗಿರುವ ನಂಬರ್ ಗೆ ಓಟಿಪಿ ಬರುತ್ತದೆ.
4. ಓಟಿಪಿ ಪರಿಶೀಲನೆ ಪೂರ್ಣಗೊಳಿಸಿ
5. ನಿಮ್ಮ ಕಂತುಗಳ ಸಂಪೂರ್ಣವಾದ ಮಾಹಿತಿ ನಿಮಗೆ ಕಂಪ್ಯೂಟರ್ ಪರದೆ ಮೇಲೆ ಕಾಣುತ್ತದೆ.

Pm Kisan Beneficiary list ನಲ್ಲಿ ನಿಮ್ಮ ಹೆಸರು ಹೇಗೆ ಚೆಕ್ ಮಾಡುವುದು?

23ನೇ ಕಂತಿನ ಹಣ ಬಿಡುಗಡೆಯಾಗುವ ಮೊದಲು ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಇದೆ ಎಂಬುದು ಖಚಿತಪಡಿಸಿಕೊಳ್ಳುವುದು ಸೂಕ್ತವಾಗಿದೆ.

1. Pm Kisan website ಓಪನ್ ಮಾಡಿ
2. Beneficiary list ಆಯ್ಕೆ ಮಾಡಿ
3. ಅಲ್ಲಿ ಕಾಣುವ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು, ಹೋಬಳಿ ಹಾಗೂ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಿ
4. Get report ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೀರಿ.

ಕೆಲ ರೈತರ ಹೆಸರುಗಳು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಿಂದ ಏಕೆ ತೆಗೆಯಲಾಗಿದೆ?

ಇದಕ್ಕೆ ಹಲವಾರು ಕಾರಣಗಳಿರಬಹುದು ಅವುಗಳು ಈ ಕೆಳಗಿನಂತೆವೆ.

1. E-kyc ಪೂರ್ಣಗೊಳ್ಳದೆ ಇರಬಹುದು
2. ಸರಿಯಾದ ಭೂ ದಾಖಲಾತಿಗಳು ಆಧಾರ್ ಕಾರ್ಡಲ್ಲಿ ಜೋಡಣೆ ಆಗದೆ ಇರಬಹುದು
3. ತಪ್ಪದ ಬ್ಯಾಂಕ್ ಖಾತೆ ನೀಡಿರಬಹುದು
4. ಇತ್ತೀಚಿಗೆ ಯಾವುದಾದರೂ ಹೆಚ್ಚಿನ ಭೂಮಿಯ ದಾಖಲೆಗಳನ್ನು ಹೊಂದಿರಬಹುದು
5. ಆಧಾರ್ ಲಿಂಕ್ ಸಮಸ್ಯೆ ಇರಬಹುದು

ಹೀಗಾಗಿ ಹಲವಾರು ರೈತರು ತಮ್ಮ ಎಲ್ಲಾ ದಾಖಲೆಗಳನ್ನು ಸರಿಯಾಗಿ ಅಪ್ಡೇಟ್ ಮಾಡಿಕೊಳ್ಳುವುದು ಸೂಕ್ತವಾಗಿದೆ

Pm Kishan beneficiary status Link – Click

Pm Kisan 23rd installment 2026 latest news

20 ಜೂನ್ 2026 ರಂದು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 23ನೇ ಕಂತು ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ ಈ ಕುರಿತು ಈಗಾಗಲೇ ಕೇಂದ್ರ ಸರ್ಕಾರವು ಸ್ಪಷ್ಟಪಡಿಸಿದೆ. ಒಂದು ವೇಳೆ ekyc ಪೂರ್ಣಗೊಳಿಸಿದ ರೈತರು ತಕ್ಷಣವೇ ಸೇವಾ ಕೇಂದ್ರಕ್ಕೆ ಭೇಟಿ e-KYC ಅಪ್ಡೇಟ್ ಮಾಡಿಸಿಕೊಳ್ಳಿ.

Leave a Comment