10ನೇ ಪಾಸ್ ಆದ ಅಭ್ಯರ್ಥಿಗಳವರೆಗೆ ಸಂಗೊಳ್ಳಿ ಸೈನಿಕ ಶಾಲೆಯಲ್ಲಿ ಉದ್ಯೋಗ! KSRSS Recruitment 2026 | ₹1,15,000 Salary
ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ನೇಮಕಾತಿ 2026 ಇಲಾಖೆಯಲ್ಲಿ ಖಾಲಿ ಇರುವ ಹಾಸ್ಟೆಲ್ ವಾರ್ಡನ್, ಮೆಡಿಕಲ್ ಆಫೀಸರ್ ಹಾಗೂ ಸ್ವಿಮ್ಮಿಂಗ್ ಕೋಚ್ ಹುದ್ದೆಗಳಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. 10ನೇ ತರಗತಿ ದ್ವಿತೀಯ ಪಿಯುಸಿ, ಡಿಪ್ಲೋಮೋ ಹಾಗೂ ಪದವಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆದ್ದರಿಂದ ಇಂಥ ಅವಕಾಶವನ್ನು ಯಾರು ಸಹ ಮಿಸ್ ಮಾಡಿಕೊಳ್ಳದೆ ಅರ್ಜಿಯನ್ನ ಸಲ್ಲಿಸಿ. ಆಯ್ಕೆ ಆದವರಿಗೆ ಹುದ್ದೆಗಳಿಗೆ ಅನುಗುಣವಾಗಿ 21,600 ರಿಂದ 1,15,000 ವೇತನವನ್ನು ಪ್ರತಿ ತಿಂಗಳಿಗೆ ನೀಡಲಾಗುತ್ತದೆ. ಈ ಹುದ್ದೆಗಳಿಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆ ಇರುವುದಿಲ್ಲ ಮೆರಿಟ್, ಸಂದರ್ಶನ ಹಾಗೂ ಕೌಶಲ್ಯದ ಆಧಾರದ ಮೇಲೆ ನೇಮಕಾತಿ ಇರುತ್ತದೆ. ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಇಲಾಖೆಯ ಹುದ್ದೆಗಳಿಗೆ ನಿಗದಿಪಡಿಸಿದ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.
KSRSS Recruitment 2026 – ಪ್ರಮುಖ ವಿವರಣೆ (Overview)
ನೇಮಕಾತಿ ಇಲಾಖೆ ಹೆಸರು:
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ (KSRSS Recruitment 2026)
ಹುದ್ದೆಗಳ ಹೆಸರು:
1. ಕ್ಲರ್ಕ್
2. Electrician cum pump /plant operator
3. Driver
4. Store keeper
5. Swimming coach male and female
6. Music teacher
7. Hostel warden male
8. PT/ sports
9. Female nurse
10. ಕರಕುಶಲ ಬೋಧಕರು
11. TGT (Social science, science (physics)
12. Medical officer
13. Administrative officer
ಒಟ್ಟು ಹುದ್ದೆಗಳ ಸಂಖ್ಯೆ:
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಇಲಾಖೆಯಲ್ಲಿ ಒಟ್ಟು 20 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳು ನಮ್ಮ ಕರ್ನಾಟಕದಲ್ಲಿ ಖಾಲಿ ಇರುವುದರಿಂದ ಆಸಕ್ತಿ ಹಾಗೂ ಅರ್ಹತೆ ಪಡೆದ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಉದ್ಯೋಗದ ಸ್ಥಳ: [ belagavi ]
KSRSS Recruitment 2026 – ಸಂಬಳದ ಮಾಹಿತಿ (Salary Details)
ವೇತನ ಶ್ರೇಣಿ:
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಇಲಾಖೆಯ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ಇಲಾಖೆಯ ನಿಯಮಗಳ ಅನುಸಾರ ತಿಂಗಳಿಗೆ 21600 ರಿಂದ 1,15,000 ವೇತನ ನೀಡಲಾಗುತ್ತದೆ.
Also Read 📢 : DHFWS Hassan Recruitment 2026: 10ನೇ ಪಾಸ್ಗೆ ಉದ್ಯೋಗ! Staff Nurse, Pharmacist ಹುದ್ದೆಗಳು | ₹57,550 ಸಂಬಳ
ಮುಖ್ಯ ಸೂಚನೆ:
ನಾವು ನೀಡುವ ಪ್ರತಿಯೊಂದು ಉದ್ಯೋಗದ ಮಾಹಿತಿಯು ಉಚಿತವಾಗಿದ್ದು ನಾವು ನೀಡುವ ಮಾಹಿತಿಗೆ ಯಾವುದೇ ರೀತಿಯ ಹಣವನ್ನು ಕೇಳುವುದಿಲ್ಲ. jobsexplain.com ಈ website ಕರ್ನಾಟಕದ ಅಭ್ಯರ್ಥಿಗಳಿಗೆ ಹಾಗೂ ಉದ್ಯೋಗ ಬಯಸುವ ವಿದ್ಯಾರ್ಥಿಗಳಿಗೆ ಉಚಿತವಾದ ಉದ್ಯೋಗ ಮಾಹಿತಿ ನೀಡುವ website. ಒಂದು ವೇಳೆ ನಮ್ಮ ಹೆಸರಿನಲ್ಲಿ ಯಾರಾದರೂ ಹಣ ಪಾವತಿ ಮಾಡಲು ನಿಮಗೆ WhatsApp ಅಥವಾ Instagram ಮುಂತಾದ ಸೋಶಿಯಲ್ ಪ್ಲಾಟ್ಫಾರ್ಮ್ಗಳ ಮೂಲಕ ಹಣ ಪಾವತಿ ಮಾಡಲು ಹೇಳಿದರೆ ದಯವಿಟ್ಟು ಹಣವನ್ನು ನೀಡಬೇಡಿ. ಈ ಕುರಿತು ನಮಗೆ ತಿಳಿಸಿ ನಮ್ಮ ವಾಟ್ಸಾಪ್ ನಂಬರ್ : 8050798925 ಹೆಚ್ಚಿನ ಮಾಹಿತಿಗಾಗಿ ವಾಟ್ಸಾಪ್ ಮೂಲಕ ನಮ್ಮನ್ನು ಸಂಪರ್ಕಿಸಿ ಹಾಗೂ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮುಂಚೆ ನಾವು ಕೆಳಗಡೆ ನೀಡಿರುವ ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಸ್ಪಷ್ಟವಾಗಿ ಓದಿ ತದನಂತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.
KSRSS Recruitment 2026 – ಶೈಕ್ಷಣಿಕ ಅರ್ಹತೆಗಳು (Qualification)
ಶೈಕ್ಷಣಿಕ ವಿದ್ಯಾರ್ಹತೆ:
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ ಹುದ್ದೆಗಳಿಗೆ ಅನುಗುಣವಾಗಿ 10th/ PUC/diploma/ graduation/post graduation/b.Ed ಶೈಕ್ಷಣಿಕ ಅರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು.
- Administration Officer: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (Bachelor’s Degree). ಜೊತೆಗೆ ರಕ್ಷಣಾ ಪಡೆಗಳಲ್ಲಿ (Army, Navy ಅಥವಾ Air Force) Lt Col / Col / Maj ಅಥವಾ ತತ್ಸಮಾನ ಹುದ್ದೆ ನಿರ್ವಹಿಸಿರಬೇಕು ಹಾಗೂ ಆಡಳಿತ ಮತ್ತು ಲಾಜಿಸ್ಟಿಕ್ಸ್ನಲ್ಲಿ 10 ವರ್ಷಗಳಿಗಿಂತ ಹೆಚ್ಚಿನ ಅನುಭವ ಹೊಂದಿರಬೇಕು.
- Medical Officer: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ 55% ಅಂಕಗಳೊಂದಿಗೆ MBBS ಅಥವಾ BAMS ಪದವಿ.
- TGT – Science (Physics): ಸಂಬಂಧಿತ ವಿಷಯದಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಪದವಿ (Bachelor’s Degree) ಮತ್ತು NCTE ಮಾನ್ಯತೆ ಪಡೆದ ಸಂಸ್ಥೆಯಿಂದ ಕನಿಷ್ಠ 50% ಅಂಕಗಳೊಂದಿಗೆ B.Ed. ಪದವಿ.
- TGT – Social Science: ಸಂಬಂಧಿತ ವಿಷಯದಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಪದವಿ (Bachelor’s Degree) ಮತ್ತು NCTE ಮಾನ್ಯತೆ ಪಡೆದ ಸಂಸ್ಥೆಯಿಂದ ಕನಿಷ್ಠ 50% ಅಂಕಗಳೊಂದಿಗೆ B.Ed. ಪದವಿ.
- Craft Instructor: ಕನಿಷ್ಠ 50% ಅಂಕಗಳೊಂದಿಗೆ ಫೈನ್ ಆರ್ಟ್ಸ್ನಲ್ಲಿ ಪದವಿ (Bachelor’s Degree in Fine Arts – ಪದವಿಯ ಎಲ್ಲಾ ವರ್ಷಗಳಲ್ಲಿ ಡ್ರಾಯಿಂಗ್ ಮತ್ತು ಪೇಂಟಿಂಗ್ ಮುಖ್ಯ ವಿಷಯವಾಗಿ ಅಭ್ಯಾಸ ಮಾಡಿರಬೇಕು) ಹಾಗೂ NCTE ಮಾನ್ಯತೆ ಪಡೆದ ಸಂಸ್ಥೆಯಿಂದ ಕನಿಷ್ಠ 50% ಅಂಕಗಳೊಂದಿಗೆ B.Ed. ಪದವಿ.
- Female Nurse: ಕನಿಷ್ಠ 50% ಒಟ್ಟು ಅಂಕಗಳೊಂದಿಗೆ ಡಿಪ್ಲೊಮಾ ಇನ್ ನರ್ಸಿಂಗ್ / GNM ಡಿಪ್ಲೊಮಾ / B.Sc. ನರ್ಸಿಂಗ್ ಹಾಗೂ ರಾಜ್ಯ ನರ್ಸಿಂಗ್ ಕೌನ್ಸಿಲ್ನಲ್ಲಿ ನೋಂದಣಿ ಮತ್ತು ಮಾನ್ಯತೆ ಪಡೆದ ಶಾಲೆ ಅಥವಾ ಆಸ್ಪತ್ರೆಯಲ್ಲಿ ಕನಿಷ್ಠ 2 ವರ್ಷಗಳ ಸೇವಾ ಅನುಭವ.
- PT / Sports / Drill Instructor: ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತರಗತಿ (PUC) ಉತ್ತೀರ್ಣ ಹಾಗೂ PT / Sports / Drill ಅರ್ಹತಾ ಪ್ರಮಾಣಪತ್ರ ಹೊಂದಿರಬೇಕು.
- Hostel Warden (Male): ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತರಗತಿ (PUC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
- Music Teacher / Band Master: ಕನಿಷ್ಠ 50% ಅಂಕಗಳೊಂದಿಗೆ ಸಂಗೀತ ವಿಷಯದಲ್ಲಿ ಪದವಿ (Bachelor’s Degree with Music – ಪದವಿಯ ಮೂರೂ ವರ್ಷಗಳಲ್ಲಿ ಸಂಗೀತ ಮುಖ್ಯ ವಿಷಯವಾಗಿರಬೇಕು) ಅಥವಾ AEC ಟ್ರೈನಿಂಗ್ ಕಾಲೇಜ್ & ಸೆಂಟರ್ ಪಚ್ಮರ್ಹಿ ಇಂದ ಪೊಟೆನ್ಷಿಯಲ್ ಬ್ಯಾಂಡ್ ಮಾಸ್ಟರ್ / ಬ್ಯಾಂಡ್ ಮೇಜರ್ / ಡ್ರಮ್ ಮೇಜರ್ ಕೋರ್ಸ್ (ಅಥವಾ ನೌಕಾಪಡೆ/ವಾಯುಪಡೆಯ ತತ್ಸಮಾನ ಕೋರ್ಸ್).
- Swimming Coach (Male): ಸ್ವಿಮ್ಮಿಂಗ್ ಕೋಚ್ ಕಮ್ ಲೈಫ್ ಗಾರ್ಡ್ನಲ್ಲಿ ಡಿಪ್ಲೊಮಾ ಅಥವಾ ಪ್ರಮಾಣಪತ್ರ ಹೊಂದಿರಬೇಕು ಅಥವಾ ಜಿಲ್ಲಾ/ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಈಜುಗಾರರಾಗಿ ಭಾಗವಹಿಸಿರಬೇಕು.
- Swimming Coach (Female): ಸ್ವಿಮ್ಮಿಂಗ್ ಕೋಚ್ ಕಮ್ ಲೈಫ್ ಗಾರ್ಡ್ನಲ್ಲಿ ಡಿಪ್ಲೊಮಾ ಅಥವಾ ಪ್ರಮಾಣಪತ್ರ ಹೊಂದಿರಬೇಕು ಅಥವಾ ಜಿಲ್ಲಾ/ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಈಜುಗಾರರಾಗಿ ಭಾಗವಹಿಸಿರಬೇಕು.
- Store Keeper (Technical): ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತರಗತಿ (PUC) ಉತ್ತೀರ್ಣ ಹಾಗೂ ಸ್ಟೋರ್ಸ್/ವಾಹನಗಳು/ಇಂಜಿನಿಯರಿಂಗ್ ಉಪಕರಣಗಳು ಮತ್ತು ಲಾಜಿಸ್ಟಿಕ್ಸ್ಗೆ ಸಂಬಂಧಿಸಿದ ಸ್ಟೋರ್ ಕೀಪಿಂಗ್ ಜ್ಞಾನ ಹೊಂದಿರಬೇಕು.
- Driver: SSLC (10ನೇ ತರಗತಿ) ಉತ್ತೀರ್ಣ, ಲಘು ಮತ್ತು ಭಾರಿ ವಾಹನಗಳ (LMV ಮತ್ತು HMV) ಚಾಲನಾ ಪರವಾನಗಿ ಹಾಗೂ ಲಘು ವಾಹನ, ಮಿನಿ ಬಸ್, ವ್ಯಾನ್ ಅಥವಾ ಹೆವಿ ಬಸ್ ಚಾಲನೆಯಲ್ಲಿ ಕನಿಷ್ಠ 1 ವರ್ಷದ ಅನುಭವ. (ಕೇಂದ್ರ ಮೋಟಾರು ವಾಹನ ನಿಯಮಗಳು 1989 ರ ಅನ್ವಯ 31 ಡಿಸೆಂಬರ್ 2025 ರ ನಂತರ ಪಡೆದ Form 1-A ಮೆಡಿಕಲ್ ಫಿಟ್ನೆಸ್ ಪ್ರಮಾಣಪತ್ರ ಹೊಂದಿರಬೇಕು).
- Electrician cum Pump / Plant Operator: 10ನೇ ತರಗತಿ ಉತ್ತೀರ್ಣ ಹಾಗೂ ಮಾನ್ಯತೆ ಪಡೆದ ಸಂಸ್ಥೆಯಿಂದ ಎಲೆಕ್ಟ್ರಿಕಲ್ ಕೋರ್ಸ್ನಲ್ಲಿ ಡಿಪ್ಲೊಮಾ (ITI ಅಥವಾ ಪಾಲಿಟೆಕ್ನಿಕ್).
- Clerk: ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತರಗತಿ (PUC) ಉತ್ತೀರ್ಣ, ಇಂಗ್ಲಿಷ್/ಕನ್ನಡ/ಹಿಂದಿ ಟೈಪಿಂಗ್ನಲ್ಲಿ ನಿಮಿಷಕ್ಕೆ 40 ಪದಗಳ (40 wpm) ವೇಗ ಹಾಗೂ ಶಾಲೆ ಅಥವಾ ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ.
KSRSS Recruitment 2026 – ವಯೋಮಿತಿ ವಿವರಣೆ (Age Limit)
ವಯೋಮಿತಿ:
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ಗರಿಷ್ಠ ವಯೋಮಿತಿ 50 ವರ್ಷ ನಿಗದಿಪಡಿಸಲಾಗಿರುತ್ತದೆ. ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲಾಖೆಯ ಅಧಿಕೃತ ಅಧಿಸೂಚನೆ ಗಮನಿಸಿ.
ವಯೋಮಿತಿ ಸಡಿಲಿಕೆ ವಿವರಣೆ:
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಇಲಾಖೆಯ ನಿಯಮಗಳ ಅನ್ವಯ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ಬೇಕಾದಲ್ಲಿ ನಾವು ನೀಡಿರುವ ಅಧಿಸೂಚನೆಯನ್ನು ಗಮನಿಸಿ.
KSRSS Recruitment 2026 – ಅರ್ಜಿ ಶುಲ್ಕ (Application Fee)
ಅರ್ಜಿ ಶುಲ್ಕ:
• ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: 500/-
• 2A/2B/3A/3B ವರ್ಗದ ಅಭ್ಯರ್ಥಿಗಳಿಗೆ: 500/-
• ಪರಿಶಿಷ್ಟ ಜಾತಿ ಹಾಗೂ ಪಂಗಡ ಅಭ್ಯರ್ಥಿಗಳಿಗೆ: 350/-
• ಅಂಗವಿಕಲ ಅಭ್ಯರ್ಥಿಗಳಿಗೆ: 350/
KSRSS Recruitment 2026 – ಆಯ್ಕೆ ವಿಧಾನ (Selection Process)
ಆಯ್ಕೆ ವಿಧಾನ:
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯ ನಿಯಮಗಳ ಅನುಸಾರ ಹುದ್ದೆಗಳಿಗೆ ಅನುಗುಣವಾಗಿ ದಾಖಲಾತಿ ಪರಿಶೀಲನೆ ಹಾಗೂ ಮೆರಿಟ್ ಲಿಸ್ಟ್ ಹಾಗೂ ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
KSRSS Recruitment 2026 – offline ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? (How to Apply)
ಅರ್ಜಿ ಸಲ್ಲಿಸುವ ವಿಧಾನ:
- ಅರ್ಜಿ ನಮೂನೆ ಪಡೆಯುವುದು (Application Form)
- ಅಭ್ಯರ್ಥಿಗಳು ಶಾಲೆಯ ಅಧಿಕೃತ ವೆಬ್ಸೈಟ್ ಆದ www.ksrss.com ನ “Recruitment” ಟ್ಯಾಬ್ಗೆ ಭೇಟಿ ನೀಡಿ, ನಿಗದಿತ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಬೇಕು.
- ಅರ್ಜಿಯನ್ನು ಕೇವಲ ಆಫ್ಲೈನ್ (Offline) ಮೂಲಕವೇ ಸಲ್ಲಿಸಬೇಕು.
- ಅರ್ಜಿ ಶುಲ್ಕ ಮತ್ತು ಪಾವತಿ ವಿಧಾನ (Application Fee & Payment Mode)
ಅರ್ಜಿ ಶುಲ್ಕವನ್ನು ಅಧಿಸೂಚನೆಯಲ್ಲಿ ನೀಡಲಾಗಿರುವ QR Code ಸ್ಕ್ಯಾನ್ ಮಾಡುವ ಮೂಲಕ ಆನ್ಲೈನ್ನಲ್ಲಿ ಪಾವತಿಸಬೇಕು:
- ಸಾಮಾನ್ಯ (General) ಮತ್ತು OBC ಅಭ್ಯರ್ಥಿಗಳಿಗೆ: ₹500/-
- SC ಮತ್ತು ST ಅಭ್ಯರ್ಥಿಗಳಿಗೆ: ₹350/-
ಮುಖ್ಯ ಸೂಚನೆ: ಹಣ ಪಾವತಿಸಿದ ರಸೀದಿ ಅಥವಾ ವಹಿವಾಟಿನ ವಿವರಗಳ ಪ್ರತಿಯನ್ನು (UTR / Transaction ID ಮತ್ತು ದಿನಾಂಕ ಸ್ಪಷ್ಟವಾಗಿ ಕಾಣುವಂತೆ) ಅರ್ಜಿಯೊಂದಿಗೆ ಕಡ್ಡಾಯವಾಗಿ ಲಗತ್ತಿಸಬೇಕು. SC/ST ಅಭ್ಯರ್ಥಿಗಳು ಶುಲ್ಕ ವಿನಾಯಿತಿ ಪಡೆಯಲು ಚಾಲ್ತಿಯಲ್ಲಿರುವ ಜಾತಿ ಪ್ರಮಾಣಪತ್ರವನ್ನು ಲಗತ್ತಿಸುವುದು ಕಡ್ಡಾಯ (ಇಲ್ಲವಾದಲ್ಲಿ ಅರ್ಜಿ ತಿರಸ್ಕೃತಗೊಳ್ಳುತ್ತದೆ).
- ಲಗತ್ತಿಸಬೇಕಾದ ಅಗತ್ಯ ದಾಖಲೆಗಳು (Enclosures)
ಭರ್ತಿ ಮಾಡಿದ ಅರ್ಜಿಯೊಂದಿಗೆ ಈ ಕೆಳಗಿನ ಎಲ್ಲಾ ದಾಖಲೆಗಳ ಸ್ವಯಂ ದೃಢೀಕೃತ (Self-Attested) ಪ್ರತಿಗಳನ್ನು ಲಗತ್ತಿಸಬೇಕು:
- ಅರ್ಜಿಯಲ್ಲಿ ನಿಗದಿತ ಜಾಗದಲ್ಲಿ ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರವನ್ನು ಅಂಟಿಸಬೇಕು.
- 10ನೇ ತರಗತಿಯಿಂದ ಹಿಡಿದು ನೀವು ಪಡೆದ ಗರಿಷ್ಠ ವಿದ್ಯಾರ್ಹತೆಯವರೆಗಿನ ಎಲ್ಲಾ ಅಂಕಪಟ್ಟಿಗಳು, ಪದವಿ/ಡಿಪ್ಲೊಮಾ ಪ್ರಮಾಣಪತ್ರಗಳು (ಪ್ರತಿ ಪರೀಕ್ಷೆಯಲ್ಲಿ ಪಡೆದ ಶೇಕಡಾವಾರು ಅಂಕಗಳನ್ನು ಅರ್ಜಿಯಲ್ಲಿ ಸ್ಪಷ್ಟವಾಗಿ ನಮೂದಿಸಬೇಕು).
- ಅಂಕಗಳ ಬದಲಿಗೆ ಗ್ರೇಡ್ (Grades/CGPA) ಪಡೆದಿದ್ದಲ್ಲಿ, ಸಂಬಂಧಪಟ್ಟ ಬೋರ್ಡ್/ವಿಶ್ವವಿದ್ಯಾಲಯದ ಅಂಕ ಪರಿವರ್ತನಾ ಸೂತ್ರದ (Conversion Certificate/Formula) ಪ್ರತಿ.
- ಸಂಬಂಧಿತ ಹುದ್ದೆಗೆ ಅಗತ್ಯವಿರುವ ಸೇವಾ ಅನುಭವ ಪ್ರಮಾಣಪತ್ರಗಳು (Experience Certificates).
- ಅರ್ಜಿ ಶುಲ್ಕ ಪಾವತಿಸಿದ ರಸೀದಿ ಪ್ರತಿ (Payment Receipt / Transaction Details).
- ಜಾತಿ/ಮೀಸಲಾತಿ ಪ್ರಮಾಣಪತ್ರದ ಪ್ರತಿ (ಅನ್ವಯವಾಗುವವರಿಗೆ).
- ಚಾಲಕ (Driver) ಹುದ್ದೆಗೆ ಅರ್ಜಿ ಸಲ್ಲಿಸುವವರು: ಡ್ರೈವಿಂಗ್ ಲೈಸೆನ್ಸ್, ಅನುಭವದ ಪುರಾವೆ ಹಾಗೂ 31 ಡಿಸೆಂಬರ್ 2025 ರ ನಂತರ ಪಡೆದ Form 1-A ವೈದ್ಯಕೀಯ ಫಿಟ್ನೆಸ್ ಪ್ರಮಾಣಪತ್ರ.
- ಲಕೋಟೆಯ ಮೇಲೆ ಬರೆಯಬೇಕಾದ ವಿವರ (Envelope Super-scription)
ಅರ್ಜಿ ಮತ್ತು ದಾಖಲೆಗಳನ್ನು ಇರಿಸಿದ ಲಕೋಟೆಯ (Envelope) ಮೇಲೆ ದಪ್ಪ ಅಕ್ಷರಗಳಲ್ಲಿ (CAPITAL LETTERS) ಈ ಕೆಳಗಿನಂತೆ ಕಡ್ಡಾಯವಾಗಿ ಬರೆಯಬೇಕು:
“APPLICATION FOR THE POST OF _______________”
(ಖಾಲಿ ಜಾಗದಲ್ಲಿ ನೀವು ಅರ್ಜಿ ಸಲ್ಲಿಸುತ್ತಿರುವ ಹುದ್ದೆಯ ಹೆಸರನ್ನು ಬರೆಯಿರಿ, ಉದಾಹರಣೆಗೆ: CLERK / HOSTEL WARDEN ಇತ್ಯಾದಿ).
- ಅರ್ಜಿ ಸಲ್ಲಿಸುವ ವಿಳಾಸ ಮತ್ತು ವಿಧಾನ (Mailing Address)
- ಅರ್ಜಿಗಳನ್ನು ಕೇವಲ ಭಾರತೀಯ ಅಂಚೆ ಇಲಾಖೆಯ ನೋಂದಾಯಿತ ಅಂಚೆ (Registered Post) ಅಥವಾ ಸ್ಪೀಡ್ ಪೋಸ್ಟ್ (Speed Post) ಮೂಲಕ ಮಾತ್ರ ಕಳುಹಿಸಬೇಕು.
- ನೇರವಾಗಿ (By Hand) ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಅರ್ಜಿ ತಲುಪಬೇಕಾದ ವಿಳಾಸ:
Principal, Kranthiveera Sangolli Rayanna Sainik School, Post: Sangolli, Taluk: Bailhongal, District: Belagavi, Karnataka,Pin Code – 591115.
- ಪ್ರಮುಖ ದಿನಾಂಕ ಮತ್ತು ಇತರ ಮಾಹಿತಿ
- ಅರ್ಜಿ ತಲುಪಲು ಕೊನೆಯ ದಿನಾಂಕ: 02 ನವೆಂಬರ್ 2026 (02 Nov 2026).
(ಅಂಚೆ ವಿಳಂಬಕ್ಕೆ ಶಾಲಾ ಆಡಳಿತ ಮಂಡಳಿ ಜವಾಬ್ದಾರರಾಗಿರುವುದಿಲ್ಲ).
- ಸಂದರ್ಶನ ಹಾಗೂ ಡೆಮೋ ಪರೀಕ್ಷೆಯ ವಿವರಗಳನ್ನು, ದಿನಾಂಕವನ್ನು ಶಾಲಾ ವೆಬ್ಸೈಟ್ (www.ksrss.com) ನಲ್ಲಿ ಅಥವಾ ಅಭ್ಯರ್ಥಿಯ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುವುದು. ಆದ್ದರಿಂದ ಅರ್ಜಿಯಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಸ್ಪಷ್ಟವಾಗಿ ಬರೆಯಬೇಕು.
KSRSS Recruitment 2026 – ಪ್ರಮುಖ ದಿನಾಂಕಗಳು (important dates)
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 19-08-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-11-2026
(ಒಂದು ವೇಳೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಇಲಾಖೆಯ ನೋಟಿಫಿಕೇಶನ್ ಲಿಂಕ್ ಡೌನ್ಲೋಡ್ ಆಗದಿದ್ದರೆ ನಮ್ಮ ವಾಟ್ಸಪ್ ನಂಬರ್ 8050798925 ಈ ನಂಬರಿಗೆ ಮೆಸೇಜ್ ಮಾಡಿ)
KSRSS Recruitment 2026 – ಪ್ರಮುಖ ಲಿಂಕ್ ಗಳು (Important Links)
| Official wedsite | Click |
| Notification Link | Click |
| Telegram Join Link | Click |
| WhatsApp channel | Click |
| App Link | Click |
ಮುಖ್ಯವಾದ ಮಾಹಿತಿ:
ಪ್ರಿಯ ಸ್ನೇಹಿತರೆ, ನಾವು ನೀಡಿರುವ ಈ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಇಲಾಖೆಯ ಈ ಉದ್ಯೋಗದ ಮಾಹಿತಿ ಇಷ್ಟವಾಗಿದ್ದರೆ ದಯವಿಟ್ಟು ಮಾಹಿತಿ ಓದಿ ಸುಮ್ಮನಾಗಬೇಡಿ ಆದಷ್ಟು ಈ ಮಾಹಿತಿಯನ್ನ ಇತರರೊಂದಿಗೆ ಹಂಚಿಕೊಳ್ಳಿ ಇದು ಇನ್ನೊಬ್ಬರ ಭವಿಷ್ಯವನ್ನು ರೂಪಿಸುವ ಮಾಹಿತಿಯಾಗುತ್ತದೆ. ಹಾಗೆ ಈ ಮಾಹಿತಿ ಇಷ್ಟವಾಗಿದ್ದರೆ ನಿಮ್ಮ Facebook group ಮತ್ತು WhatsApp group ಹಾಗೂ telegram ಮೂಲಕ ಹಂಚಿಕೊಳ್ಳಿ.

Hello friends, my name is Basavaraj. I am the writer and founder of this blog. I share all the information related to Central government jobs, State government jobs, and government schemes through this website.