₹60,000/- ವರೆಗಿನ ಸಂಬಳದ ಸರ್ಕಾರಿ ಉದ್ಯೋಗ! ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ನೇಮಕಾತಿ 2026
ಜಿಲ್ಲಾ ಆರೋಗ್ಯ ಇಲಾಖೆ ನೇಮಕಾತಿ 2026 ಕಾಲಿ ಇರುವ ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದವರಿಗೆ 60,000 ಸಂಬಳ ನೀಡಲಾಗುತ್ತದೆ. ಯಾವುದೇ ರೀತಿಯ ಲಿಖಿತ ಪರೀಕ್ಷೆ ಇರುವುದಿಲ್ಲ ಕೇವಲ ಸಂದರ್ಶನದ ಆಧಾರದ ಮೇಲೆ ನೇಮಕಾತಿ ಇರುತ್ತದೆ ಆದ್ದರಿಂದ ಇಂತಹ ಅವಕಾಶವನ್ನು ನಮ್ಮ ಕರ್ನಾಟಕದ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಮಿಸ್ ಮಾಡಿಕೊಳ್ಳದೆ ಅರ್ಜಿ ಸಲ್ಲಿಸಿ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಕೋಲಾರ ಜಿಲ್ಲೆಯ ಹುದ್ದೆಗಳಿಗೆ ಸಂಬಂಧಿಸಿದ ಇನ್ನಷ್ಟು ಹೆಚ್ಚಿನ ಮಾಹಿತಿ ವಿಧಾನ, ಅರ್ಜಿ ಹೇಗೆ ಸಲ್ಲಿಸುವುದು, ಪ್ರಮುಖ ದಿನಾಂಕಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಪ್ರತಿದಿನ ಉದ್ಯೋಗದ ಮಾಹಿತಿ ಪಡೆಯಲು ನಮ್ಮ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡುತ್ತೇನೆ
ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ನೇಮಕಾತಿ 2026 – ಪ್ರಮುಖ ವಿವರಣೆ (Overview)
ನೇಮಕಾತಿ ಇಲಾಖೆ ಹೆಸರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಕೋಲಾರ (ರಾಷ್ಟ್ರೀಯ ಆರೋಗ್ಯ ಅಭಿಯಾನ – NHM)
ಹುದ್ದೆಗಳ ಹೆಸರು:
- ವೈದ್ಯಾಧಿಕಾರಿಗಳು (MBBS)
- ಪ್ರಯೋಗ ಶಾಲಾ ತಂತ್ರಜ್ಞರು (Laboratory Technician)
ಒಟ್ಟು ಹುದ್ದೆಗಳ ಸಂಖ್ಯೆ: ಒಟ್ಟು 2 ಹುದ್ದೆಗಳು ಖಾಲಿ ಇವೆ (ವೈದ್ಯಾಧಿಕಾರಿಗಳು – 1, ಪ್ರಯೋಗ ಶಾಲಾ ತಂತ್ರಜ್ಞರು – 1). ಈ ಹುದ್ದೆಗಳು ಕೋಲಾರ ಜಿಲ್ಲೆಯಲ್ಲಿ ಖಾಲಿ ಇರುವುದರಿಂದ ಆಸಕ್ತಿ ಹಾಗೂ ಅರ್ಹತೆ ಪಡೆದ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಉದ್ಯೋಗದ ಸ್ಥಳ: [ ಕೋಲಾರ ]
ಸಂಬಳದ ಮಾಹಿತಿ (Salary Details)
ವೇತನ ಶ್ರೇಣಿ: ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ಇಲಾಖೆಯ ನಿಯಮಗಳ ಅನುಸಾರ ವೇತನ ನೀಡಲಾಗುತ್ತದೆ:
- ವೈದ್ಯಾಧಿಕಾರಿಗಳು: ಮಾಸಿಕ ₹60,000/-
- ಪ್ರಯೋಗ ಶಾಲಾ ತಂತ್ರಜ್ಞರು: ಮಾಸಿಕ ₹12,525/-
ಮುಖ್ಯ ಸೂಚನೆ:
ನಾವು ನೀಡುವ ಪ್ರತಿಯೊಂದು ಉದ್ಯೋಗದ ಮಾಹಿತಿಯು ಉಚಿತವಾಗಿದ್ದು ನಾವು ನೀಡುವ ಮಾಹಿತಿಗೆ ಯಾವುದೇ ರೀತಿಯ ಹಣವನ್ನು ಕೇಳುವುದಿಲ್ಲ. jobsexplain.com ಈ website ಕರ್ನಾಟಕದ ಅಭ್ಯರ್ಥಿಗಳಿಗೆ ಹಾಗೂ ಉದ್ಯೋಗ ಬಯಸುವ ವಿದ್ಯಾರ್ಥಿಗಳಿಗೆ ಉಚಿತವಾದ ಉದ್ಯೋಗ ಮಾಹಿತಿ ನೀಡುವ website. ಒಂದು ವೇಳೆ ನಮ್ಮ ಹೆಸರಿನಲ್ಲಿ ಯಾರಾದರೂ ಹಣ ಪಾವತಿ ಮಾಡಲು ನಿಮಗೆ WhatsApp ಅಥವಾ Instagram ಮುಂತಾದ ಸೋಶಿಯಲ್ ಪ್ಲಾಟ್ಫಾರ್ಮ್ಗಳ ಮೂಲಕ ಹಣ ಪಾವತಿ ಮಾಡಲು ಹೇಳಿದರೆ ದಯವಿಟ್ಟು ಹಣವನ್ನು ನೀಡಬೇಡಿ. ಈ ಕುರಿತು ನಮಗೆ ತಿಳಿಸಿ ನಮ್ಮ ವಾಟ್ಸಾಪ್ ನಂಬರ್ : 8050798925 ಹೆಚ್ಚಿನ ಮಾಹಿತಿಗಾಗಿ ವಾಟ್ಸಾಪ್ ಮೂಲಕ ನಮ್ಮನ್ನು ಸಂಪರ್ಕಿಸಿ ಹಾಗೂ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮುಂಚೆ ನಾವು ಕೆಳಗಡೆ ನೀಡಿರುವ ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಸ್ಪಷ್ಟವಾಗಿ ಓದಿ ತದನಂತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.
ಶೈಕ್ಷಣಿಕ ಅರ್ಹತೆಗಳು (Qualification)
ಶೈಕ್ಷಣಿಕ ವಿದ್ಯಾರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದೆಗಳಿಗೆ ಅನುಗುಣವಾಗಿ ಈ ಕೆಳಗಿನ ವಿದ್ಯಾರ್ಹತೆ ಹಾಗೂ ಅನುಭವ ಹೊಂದಿರಬೇಕು:
- ವೈದ್ಯಾಧಿಕಾರಿಗಳು: ಎಂ.ಬಿ.ಬಿ.ಎಸ್ (MBBS) ಉತ್ತೀರ್ಣರಾಗಿರಬೇಕು ಹಾಗೂ ಕಡ್ಡಾಯವಾಗಿ ಇಂಟರ್ನ್ಶಿಪ್ (Internship) ಪೂರೈಸಿರಬೇಕು. ಕೆ.ಎಂ.ಸಿ (KMC) ನೋಂದಣಿ ಮತ್ತು ಸಂಬಂಧಪಟ್ಟ ವಿಶ್ವವಿದ್ಯಾಲಯದಿಂದ Convocation / Degree certificate ಹೊಂದಿರಬೇಕು. ಕನಿಷ್ಠ 2 ವರ್ಷಗಳ ಸೇವೆ ಸಲ್ಲಿಸಿರುವ ಅನುಭವ ಹೊಂದಿರಬೇಕು.
- ಪ್ರಯೋಗ ಶಾಲಾ ತಂತ್ರಜ್ಞರು: ಎಸ್ಎಸ್ಎಲ್ಸಿ / ಪಿಯುಸಿ ಮತ್ತು ಪ್ರಯೋಗಶಾಲಾ ತಂತ್ರಜ್ಞತೆಯ ಡಿಪ್ಲೋಮೋ (Diploma in Medical Laboratory Technology) ಉತ್ತೀರ್ಣರಾಗಿರಬೇಕು. ಕಡ್ಡಾಯವಾಗಿ ಕರ್ನಾಟಕ ರಾಜ್ಯ ಅರೆವೈದ್ಯಕೀಯ ಮಂಡಳಿಯ ನೋಂದಣಿ ಮತ್ತು ಕಂಪ್ಯೂಟರ್ ಸಾಕ್ಷರತೆ ಹೊಂದಿರಬೇಕು. ಕನಿಷ್ಠ 2 ವರ್ಷಗಳ ಸೇವೆ ಸಲ್ಲಿಸಿರುವ ಅನುಭವ ಹೊಂದಿರಬೇಕು.
ವಯೋಮಿತಿ ವಿವರಣೆ (Age Limit)
ವಯೋಮಿತಿ: ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ನಿಗದಿಪಡಿಸಲಾದ ಗರಿಷ್ಠ ವಯೋಮಿತಿ ವಿವರ ಹೀಗಿದೆ:
- ವೈದ್ಯಾಧಿಕಾರಿಗಳು: ಗರಿಷ್ಠ 65 ವರ್ಷ
- ಪ್ರಯೋಗ ಶಾಲಾ ತಂತ್ರಜ್ಞರು: ಗರಿಷ್ಠ 45 ವರ್ಷ
ವಯೋಮಿತಿ ಸಡಿಲಿಕೆ ವಿವರಣೆ: ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಹಾಗೂ ಕರ್ನಾಟಕ ಸರ್ಕಾರದ ನಿಯಮಾವಳಿಗಳ ಅನ್ವಯ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಗಮನಿಸಿ.
ಅರ್ಜಿ ಶುಲ್ಕ (Application Fee)
ಅರ್ಜಿ ಶುಲ್ಕ: ಈ ನೇರ ಸಂದರ್ಶನದ ಮೂಲಕ ನಡೆಯುವ ಗುತ್ತಿಗೆ ಆಧಾರಿತ ನೇಮಕಾತಿಗೆ ಅಧಿಕೃತ ಅಧಿಸೂಚನೆಯಲ್ಲಿ ಯಾವುದೇ ಪ್ರತ್ಯೇಕ ಅರ್ಜಿ ಶುಲ್ಕವನ್ನು ನಿಗದಿಪಡಿಸಿರುವುದಿಲ್ಲ. ಹೆಚ್ಚಿನ ವಿವರಗಳಿಗಾಗಿ ಸಂದರ್ಶನದ ದಿನದಂದು ಇಲಾಖಾ ಸೂಚನೆಗಳನ್ನು ಗಮನಿಸಿ.
ಆಯ್ಕೆ ವಿಧಾನ (Selection Process)
ಆಯ್ಕೆ ವಿಧಾನ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯ ನಿಯಮಗಳ ಅನುಸಾರ ನೇರ ಸಂದರ್ಶನ, ರೋಸ್ಟರ್ ಕಮ್ ಮೆರಿಟ್ (Roster cum Merit) ಹಾಗೂ ದಾಖಲಾತಿ ಪರಿಶೀಲನೆ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆಯಾದರೂ ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.
ಅರ್ಜಿ ಸಲ್ಲಿಸುವ ವಿಧಾನ (How to Apply)
ಅರ್ಜಿ ಸಲ್ಲಿಸುವ ವಿಧಾನ: ಈ ಹುದ್ದೆಗಳಿಗೆ ಆಸಕ್ತಿಯುಳ್ಳ ಅಭ್ಯರ್ಥಿಗಳು ನಿಗದಿತ ದಿನಾಂಕದಂದು ನೇರ ಸಂದರ್ಶನಕ್ಕೆ ಅಗತ್ಯ ದಾಖಲೆಗಳೊಂದಿಗೆ ಹಾಜರಾಗಬೇಕು. ಸಂದರ್ಶನಕ್ಕೆ ಹಾಜರಾಗುವ ಮೊದಲು ಕೆಳಗಿನ ಹಂತಗಳನ್ನು ಗಮನಿಸಿ:
- ಮೊದಲನೇ ಹಂತ: ಎಸ್ಎಸ್ಎಲ್ಸಿ / ಪಿಯುಸಿ / MBBS / Diploma in Medical Laboratory Technology ಅಂಕಪಟ್ಟಿಗಳು, ಕೋರ್ಸ್ ಕಂಪ್ಲೀಷನ್ ಸರ್ಟಿಫಿಕೇಟ್, ಜಾತಿ ಪ್ರಮಾಣ ಪತ್ರ, ಕಂಪ್ಯೂಟರ್ ಲಿಟ್ರಿಸಿ ಪ್ರಮಾಣ ಪತ್ರ, ಅನುಭವ ಪ್ರಮಾಣ ಪತ್ರ ಸೇರಿದಂತೆ ಎಲ್ಲಾ ಮೂಲ ದಾಖಲೆಗಳು ಮತ್ತು 1 ಸೆಟ್ ಜೆರಾಕ್ಸ್ ಪ್ರತಿಗಳನ್ನು ಸಿದ್ಧಪಡಿಸಿಕೊಳ್ಳಿ.
- ಎರಡನೇ ಹಂತ: ದಿನಾಂಕ 30-11-2026 ರಂದು ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 02:00 ಗಂಟೆಯೊಳಗಾಗಿ ಸಂದರ್ಶನ ಸ್ಥಳಕ್ಕೆ ಹಾಜರಾಗಿ ಅರ್ಜಿಯನ್ನು ಪಡೆದುಕೊಳ್ಳಿ.
- ಮೂರನೇ ಹಂತ: ಸಂದರ್ಶನ ಸ್ಥಳದಲ್ಲಿ ನಿಗದಿತ ಸಮಯದೊಳಗೆ (ಬೆಳಿಗ್ಗೆ 10:00 ರಿಂದ ಅಪರಾಹ್ನ 02:00 ಗಂಟೆ ಒಳಗಾಗಿ) ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ (ಈ ಸಮಯದೊಳಗೆ ನೋಂದಾಯಿಸಿಕೊಂಡ ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಪರಿಗಣಿಸಲಾಗುತ್ತದೆ).
- ನಾಲ್ಕನೇ ಹಂತ: ಭರ್ತಿ ಮಾಡಿದ ಅರ್ಜಿಯೊಂದಿಗೆ ಎಲ್ಲಾ ದಾಖಲಾತಿಗಳನ್ನು ಸಲ್ಲಿಸಿ, ನೇರ ಸಂದರ್ಶನದಲ್ಲಿ ಭಾಗವಹಿಸಿ.
- ಸಂದರ್ಶನ ನಡೆಯುವ ಸ್ಥಳ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ, ಕೆ.ಎನ್.ಟಿ.ಬಿ. ಸ್ಯಾನಿಟೋರಿಯಂ ಆಸ್ಪತ್ರೆ ಆವರಣ, ಬಂಗಾರಪೇಟೆ ರಸ್ತೆ, ಕೋಲಾರ.
ಪ್ರಮುಖ ದಿನಾಂಕಗಳು (Important Dates)
ಪ್ರಮುಖ ದಿನಾಂಕಗಳು:
- ಅಧಿಸೂಚನೆ ಪ್ರಕಟವಾದ ದಿನಾಂಕ: 16-11-2026
- ನೇರ ಸಂದರ್ಶನದ ದಿನಾಂಕ: 30-11-2026
- ಹೆಸರು ನೋಂದಣಿ ಮತ್ತು ಅರ್ಜಿ ಪಡೆಯುವ ಸಮಯ: ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 02:00 ರವರೆಗೆ
(ಒಂದು ವೇಳೆ ಇಲಾಖೆಯ ನೋಟಿಫಿಕೇಶನ್ ಲಿಂಕ್ ಡೌನ್ಲೋಡ್ ಆಗದಿದ್ದರೆ ನಮ್ಮ ವಾಟ್ಸಪ್ ನಂಬರ್ 8050798925 ಈ ನಂಬರಿಗೆ ಮೆಸೇಜ್ ಮಾಡಿ)
Kolar Health Department Recruitment 2026 – ಪ್ರಮುಖ ಲಿಂಕ್ ಗಳು (Important Links)
| wedsite link | Click |
| Notification Link | Click |
| Telegram Join Link | Click |
| WhatsApp channel | Click |
| App Link | Click |
ಮುಖ್ಯವಾದ ಮಾಹಿತಿ (Important Information)
ಪ್ರಿಯ ಸ್ನೇಹಿತರೆ, ನಾವು ನೀಡಿರುವ ಈ ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಉದ್ಯೋಗದ ಮಾಹಿತಿ ಇಷ್ಟವಾಗಿದ್ದರೆ ದಯವಿಟ್ಟು ಮಾಹಿತಿ ಓದಿ ಸುಮ್ಮನಾಗಬೇಡಿ; ಆದಷ್ಟು ಈ ಮಾಹಿತಿಯನ್ನ ಇತರರೊಂದಿಗೆ ಹಂಚಿಕೊಳ್ಳಿ. ಇದು ಇನ್ನೊಬ್ಬರ ಭವಿಷ್ಯವನ್ನು ರೂಪಿಸುವ ಮಾಹಿತಿಯಾಗುತ್ತದೆ. ಹಾಗೆಯೇ ಈ ಮಾಹಿತಿ ಇಷ್ಟವಾಗಿದ್ದರೆ ನಿಮ್ಮ Facebook group, WhatsApp group ಹಾಗೂ Telegram ಮೂಲಕ ಹಂಚಿಕೊಳ್ಳಿ.

Hello friends, my name is Basavaraj. I am the writer and founder of this blog. I share all the information related to Central government jobs, State government jobs, and government schemes through this website.