Mahila Samriddhi Yojana 2026: ಮಹಿಳೆಯರ ಸ್ವಂತ ಬಿಸಿನೆಸ್ಗೆ ಸರ್ಕಾರದಿಂದ ₹1,40,000 ಸಾಲ, ಇಂದೇ ಅರ್ಜಿ ಸಲ್ಲಿಸಿ!
ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಾವು ಮಹಿಳೆಯರಿಗೆ ಸ್ವಯಂ ಬಿಸಿನೆಸ್ ಆರಂಭಿಸಲು ಸರ್ಕಾರದಿಂದ ಸಿಗುವ 1,40,000 ರೂ ಯೋಜನೆಯ ಕುರಿತು ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ. ಹೌದು ಸ್ನೇಹಿತರೆ ನಿಮ್ಮ ಮನೆಯಲ್ಲಿ ತಾಯಿ, ಅಕ್ಕ, ತಂಗಿ ಅಥವಾ ನಿಮ್ಮ ಹೆಂಡತಿ ಏನಾದರೂ ಸ್ವಯಂ ಉದ್ಯೋಗವನ್ನು ಪ್ರಾರಂಭಿಸಲು ಸಾಲಕ್ಕಾಗಿ ಅಲ್ಲಿ ಇಲ್ಲಿ ಅಲ್ಲಿದಾಡುವ ಬದಲು ಸರ್ಕಾರವೇ ನೀಡುತ್ತಿರುವ ಈ ಯೋಜನೆಯ ಮೂಲಕ ಸುಲಭವಾಗಿ ಸಾಲ ಸೌಲಭ್ಯವನ್ನು ಪಡೆಯಬಹುದು ಅದು ಕೂಡ ಕಡಿಮೆ ಬಡ್ಡಿದರೊಂದಿಗೆ. ಅಷ್ಟಕ್ಕೂ ಮಹಿಳಾ ಸಮೃದ್ಧಿ ಯೋಜನೆ ಎಂದರೇನು? ಈ ಯೋಜನೆಗೆ ಯಾರೆಲ್ಲ ಅರ್ಹರು? ಇದುಕ್ಕಿರುವ ಕೆಲವೊಂದಿಷ್ಟು ಮಾನದಂಡಗಳು ಏನು ಎಂಬ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.
ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರೂ ಕೂಡ ಪುರುಷರಂತೆ ಸರಿ ಸಮನಾಗಿ ಕೆಲಸವನ್ನು ಮಾಡುತ್ತಿದ್ದಾರೆ, ಅವರು ಕೂಡ ಯಾರಿಗೂ ಕಮ್ಮಿ ಏನು ಇಲ್ಲ, ಮನೆಯ ಎಲ್ಲಾ ಜವಾಬ್ದಾರಿಯನ್ನ ನಿವಾರಿಸುತ್ತಾ ತಾವು ಕೂಡ ಆರ್ಥಿಕವಾಗಿ ಸ್ವಾವಲಂಬಿ ಆಗಬೇಕೆಂಬ ಕನಸು ಪ್ರತಿಯೊಬ್ಬ ಮಹಿಳೆಯದಾಗಿರುತ್ತದೆ. ಈಗ ಈ ಕನಸು ನನಸಾಗುವ ಸಮಯ ಬಂದಿದೆ ಕೇಂದ್ರ ಸರ್ಕಾರವು ಗ್ರಾಮೀಣ ಹಾಗೂ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಒಂದು ಸುವರ್ಣವಾದ ಯೋಜನೆಯನ್ನು ಜಾರಿಗೆ ತಂದಿದೆ ಅದುವೇ ಮಹಿಳಾ ಸಮೃದ್ಧಿ ಯೋಜನೆ. ಈ ಯೋಜನೆಯ ಅಡಿಯಲ್ಲಿ ಮಹಿಳೆಯರು ಸ್ವಯಂ ಉದ್ಯೋಗ ಪ್ರಾರಂಭಿಸಲು ಸುಮಾರು 1,40,000 ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬಹುದು.
ಏನಿದು ಮಹಿಳಾ ಸಮೃದ್ಧಿ ಯೋಜನೆ? (What is Mahila Samriddhi Yojana?)
ಮಹಿಳಾ ಸಮೃದ್ಧಿ ಯೋಜನೆಯ ಇದು ನಮ್ಮ ಕೇಂದ್ರ ಸರ್ಕಾರವು ಸಾಮಾಜಿಕ ಮತ್ತು ಸವಲಿಕರಣ ಸಚಿವಾಲಯದ ಅಡಿಯಲ್ಲಿ ಬರುವ ಒಂದು ಅದ್ಭುತವಾದ ಯೋಜನೆಯಾಗಿದೆ. ಇದರಲ್ಲಿ ಅನೇಕ ರೀತಿಯ ಕರಕುಶಲ ವಸ್ತುಗಳ ತಯಾರಿಕೆ, ಸಣ್ಣ ವ್ಯವಹಾರಗಳು, ಸಣ್ಣ ಕೈಗಾರಿಕೆ, ಟೈಲರಿಂಗ್, ಬ್ಯೂಟಿ ಪಾರ್ಲರ್, ಹಾಗೂ ಖುಷಿ ಆಧಾರಿತ ಉದ್ಯಮಗಳನ್ನು ಮಾಡಲು ಬಯಸುವ ಮಹಿಳೆಯರಿಗೆ ಇದು ಒಂದು ಉಪಯುಕ್ತ ಯೋಜನೆಯಾಗಿದೆ.
ಇದರಲ್ಲಿನ ವಿಶೇಷವೇನೆಂದರೆ, ಇದು ಕೇವಲ ಸಾಲ ಕೊಡುವುದು ಮಾತ್ರವಲ್ಲ ಈ ಯೋಜನೆಯ ಅಡಿಯಲ್ಲಿ ಸುಮಾರು 20 ಮಹಿಳೆಯರ ಗುಂಪುಗಳಿಗೆ ಸಂಪೂರ್ಣವಾಗಿ ಉಚಿತ ತರಬೇತಿ ಮತ್ತು ತರಬೇತಿಯ ಅವಧಿಯಲ್ಲಿ ಭತ್ಯೆ ಸಹ ನೀಡಲಾಗುತ್ತದೆ. ಮಹಿಳಾ ಸಮ್ರಾಧಿ ಯೋಜನೆಯ ಅಡಿಯಲ್ಲಿ ತರಬೇತಿ ಪಡೆದ ನಂತರ ಸ್ವ ಸಹಾಯ ಗುಂಪುಗಳಾಗಿ ವಿಂಗಡಿಸಿ ಸಾಲವನ್ನು ನೀಡಲಾಗುತ್ತದೆ.
✅ Latest news : ಉಚಿತ ಬಸ್ ಪಾಸ್ ವಿತರಣೆ 2026-27 ಆರಂಭ! ಈಗಾಗಲೇ ಹಣ ಪಾವತಿ ಮಾಡಿದವರು ಏನು ಮಾಡಬೇಕು? | Free Bus Pass 2026
Mahila Samriddhi Yojana 2026 – ಬಡ್ಡಿ ಎಷ್ಟು? ಮರುಪಾವತಿ ಹೇಗೆ?
1. ಈ ಯೋಜನೆಯ ಮೂಲಕ ಗರಿಷ್ಠ 1,40,000 ವರೆಗೂ ಸಾಲದ ಮತ್ತು ದೊರೆಯುತ್ತದೆ.
2. ವಾರ್ಷಿಕವಾಗಿ ಕೇವಲ 6% ಬಡ್ಡಿದರ ಮಾತ್ರ ನಿಗದಿಪಡಿಸಲಾಗಿರುತ್ತದೆ. ಈ ಯೋಜನೆಯ ಉಪ ಯೋಜನೆಗಳಲ್ಲಿ 2% ರಿಂದ 6% ವರೆಗೂ ಬಡ್ಡಿದರ ನಿಗದಿಪಡಿಸಲಾಗಿದೆ.
3. ಅಲೋನ್ ಹಣ ಸಿಕ್ಕ ತಕ್ಷಣವೇ EMI ಕಟ್ಟ ಬೇಕಾಗಿಲ್ಲ! ನಿಮ್ಮ ಬಿಜಿನೆಸ್ ಸೆಟ್ ಮಾಡಲು ಕನಿಷ್ಠ ಮೂರರಿಂದ ಆರು ತಿಂಗಳವರೆಗೆ ವಿನಾಯಿತಿ ಅವಧಿ ಸಹ ನಿಮಗೆ ಸಿಗಲಿದೆ
Mahila Samriddhi Yojana 2026 ಗೆ ಯಾರು ಅರ್ಜಿ ಸಲ್ಲಿಸಬಹುದು?
• ಈ ಯೋಜನೆಗೆ ಕೇವಲ ಮಹಿಳೆಯರು ಮಾತ್ರ ಅರ್ಹತೆ ಪಡೆಯುತ್ತಾರೆ
• ಕನಿಷ್ಠ 18ರಿಂದ 55 ವರ್ಷ ವಯೋಮಿತಿ ಒಳಗೆ ಇರಬೇಕು
• ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಓಬಿಸಿ ಅಥವಾ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ
• ಕುಟುಂಬದ ವಾರ್ಷಿಕ ಆದಾಯವು ಮೂರು ಲಕ್ಷಕ್ಕಿಂತ ಕಡಿಮೆ ಇರಬೇಕು ಹೆಚ್ಚಿನ ಆದಾಯ ಇದ್ದವರು ಅರ್ಜಿ ಸಲ್ಲಿಸಲು ಅನಾರಗಿರುತ್ತಾರೆ.
• ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು
Mahila Samriddhi Yojana 2026 Required Documents : ಬೇಕಾಗುವ ಪ್ರಮುಖ ದಾಖಲಾತಿಗಳು
1. ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ ಕಡ್ಡಾಯ
2. ವಿಳಾಸದ ಪುರಾವೆಗಾಗಿ ರೇಷನ್ ಕಾರ್ಡ್ ಅಥವಾ ವಿದ್ಯುತ್ ಬಿಲ್ ಬೇಕು
3. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕಡ್ಡಾಯ
4. ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್
5. ನಿಮ್ಮ ಇತ್ತೀಚಿನ passport size ಅಳತೆಯ ಭಾವಚಿತ್ರ
6. ಸ್ವಸಹಾಯ ಗುಂಪಿನ ಸದಸ್ಯತ್ವದ ಐಡಿ (ಅನ್ವಯಿಸಿದರೆ)
Mahila Samriddhi Yojana 2026 Online Application Process | ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಕೆ ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ!
• ಆಸಕ್ತ ಮಹಿಳೆಯರು ಮೊದಲಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ತದನಂತರ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ
• ಅರ್ಜಿಯಲ್ಲಿ ನಿಮ್ಮ ಹೆಸರು, ವಯಸ್ಸು ಹಾಗೂ ನಿಮ್ಮ ಬಿಸಿನೆಸ್ ಪ್ಲಾನ್ ಮತ್ತು ಅದಕ್ಕೆ ಸಂಬಂಧಿಸಿದ ಸಾಲದ ಮೊತ್ತದ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ
• ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ನಿಮ್ಮ ಜಿಲ್ಲೆಯ ರಾಜ್ಯ (state channelising Agencies) ಜಿಲ್ಲಾ ಕಚೇರಿಗಳಿಗೆ ಅಥವಾ ಆ ಯೋಜನೆಯ ಒಪ್ಪಂದ ಹೊಂದಿರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಅಥವಾ ರಾಷ್ಟ್ರೀಕೃತ (government banks) ಬ್ಯಾಂಕ್ ಗಳಿಗೆ ಅರ್ಜಿ ಸಲ್ಲಿಸಬಹುದು.

Hello friends, my name is Basavaraj. I am the writer and founder of this blog. I share all the information related to Central government jobs, State government jobs, and government schemes through this website.