ಉಚಿತ ಬಸ್ ಪಾಸ್ ವಿತರಣೆ 2026-27 ಆರಂಭ! ಈಗಾಗಲೇ ಹಣ ಪಾವತಿ ಮಾಡಿದವರು ಏನು ಮಾಡಬೇಕು? | Free Bus Pass 2026

Free Bus Pass 2026: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ! 2026-27ನೇ ಸಾಲಿನ ಉಚಿತ ಬಸ್ ಪಾಸ್ ಅರ್ಜಿ ಪ್ರಕ್ರಿಯೆ ಕುರಿತು ಸಾರಿಗೆ ಸಚಿವ ಬೈರತಿ ಸುರೇಶ್ ಮಾಹಿತಿ ನೀಡಿದ್ದಾರೆ. ಈಗಾಗಲೇ ಹಣ ಪಾವತಿಸಿದವರಿಗೆ 15 ದಿನಗಳಲ್ಲಿ ಹಣ ಮರುಪಾವತಿ (Refund) ಆಗಲಿದೆ. ಅರ್ಜಿ ಸಲ್ಲಿಸುವ ಪೂರ್ಣ ವಿವರ ಇಲ್ಲಿದೆ.

ಉಚಿತ ಬಸ್ ಪಾಸ್ ವಿತರಣೆ 2026-27 ಆರಂಭ! ಈಗಾಗಲೇ ಹಣ ಪಾವತಿ ಮಾಡಿದವರು ಏನು ಮಾಡಬೇಕು? | Free Bus Pass 2026

ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ ಬಂದಿದೆ. 2026-27 ನೇ ಸಾಲಿನಲ್ಲಿ ಶಾಲಾ ಹಾಗೂ ಕಾಲೇಜಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಅವರ ಸಂಚಾರಕ್ಕೆ ಅನುಕೂಲವಾಗಲಿ ಎಂದು ಸರ್ಕಾರವು ಉಚಿತ ಬಸ್ ಪಾಸ್ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯು ಹೊಸ ಶೈಕ್ಷಣಿಕ ವರ್ಷದಿಂದ ಅಂದರೆ, 2026-27ರ ಯೋಜನೆಯಾಗಿದೆ. ಈ ಯೋಜನೆ ಕುರಿತು ಸಾರಿಗೆ ಸಚಿವರಾದ ಬೈರತಿ ಸುರೇಶ್ ಅವರು ಮಾಹಿತಿಯನ್ನು ನೀಡಿದ್ದಾರೆ.

ಇದೇ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡುವ ಕುರಿತು ಸರ್ಕಾರವು ಐತಿಹಾಸಿಕ ಗ್ಯಾರಂಟಿ ಯೋಜನೆಗೆ ಅನುಮೋದನೆ ನೀಡಿದೆ. ಈಗಾಗಲೇ ಬಸ್ ಪಾಸ್ ಅರ್ಜಿಗೆ ಹಣ ಪಾವತಿ ಮಾಡಿ, ಬಸ್ ಪಾಸ್ ಪಡೆದಂತಹ ವಿದ್ಯಾರ್ಥಿಗಳು ಯಾವುದೇ ಗಾಬರಿಯಾಗುವ ಅವಶ್ಯಕತೆ ಇಲ್ಲ. ಏಕೆಂದರೆ ಆ ಹಣವನ್ನು ವಾಪಸ್ ನೀಡುವುದಾಗಿ ಸಾರಿಗೆ ಇಲಾಖೆಯು ಸ್ಪಷ್ಟಪಡಿಸಿದೆ.

WhatsApp Channel Join Now
Telegram Group Join Now

ಇದುವರೆಗೂ ಕೇವಲ ವಿದ್ಯಾರ್ಥಿನಿಯರಿಗೆ ಮಾತ್ರ ಶಕ್ತಿ ಯೋಜನೆಯ ಮೂಲಕ ಉಚಿತ ಬಸ್ ಪ್ರಯಾಣದ ಸೌಲಭ್ಯವಿತ್ತು. ಆದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರವು ಗಂಡು ಮತ್ತು ಹೆಣ್ಣು ಮಕ್ಕಳಿಗೂ ಸಹ ಉಚಿತ ಬಸ್ ಪಾಸ್ ಸೌಲಭ್ಯವನ್ನು ನೀಡುವುದರ ಕುರಿತು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಸರ್ಕಾರವು ಈಗಾಗಲೇ ಈ ಯೋಜನೆಯ ಕುರಿತು ಹಲವಾರು ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದೆ.

ಉಚಿತ ಬಸ್ ಪಾಸ್ (Free Bus Pass 2026) ಯೋಜನೆಯ ಉದ್ದೇಶವೇನು?

ಪ್ರಸ್ತುತ ಈಗಿನ ದಿನಮಾನಗಳಲ್ಲಿ ಪೋಷಕರಿಗೆ ಮಕ್ಕಳನ್ನು ಶಾಲೆಗೆ ಕಳಿಸುವುದೇ ಒಂದು ದೊಡ್ಡ ಜವಾಬ್ದಾರಿಯಾಗಿದೆ. ಹಲವಾರು ಬಡ ಕುಟುಂಬದ ಪೋಷಕರು ತಮ್ಮ ಮಕ್ಕಳನ್ನು ಶಾಲೆ ಅಥವಾ ಕಾಲೇಜಿಗೆ ಸೇರಿಸಲು ಅಡ್ಮಿಶನ್ ಶುಲ್ಕವನ್ನು ಪಾವತಿಸಿದ ನಂತರ, ಪ್ರತಿದಿನ ಶಾಲೆಗೆ ಹೋಗಲು ಹಾಗೂ ಬರಲು ಪ್ರಯಾಣದ ವೆಚ್ಚವನ್ನು ನೀಡುವುದು ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸುತ್ತದೆ. ಇದನ್ನು ಅರಿತುಕೊಂಡ ಸರ್ಕಾರವು ಗಂಡು ಹಾಗೂ ಹೆಣ್ಣು ಮಕ್ಕಳು ಇಬ್ಬರಿಗೂ ಯಾವುದೇ ಭೇದಭಾವ ಮಾಡದೆ ಸಮನಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ. ಇದರಿಂದ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಯರು ಯಾವುದೇ ರೀತಿಯ ಪ್ರಯಾಣದ ವೆಚ್ಚವನ್ನು ಭರಿಸುವ ಅಗತ್ಯವಿಲ್ಲ.

Latest news : ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ, ₹2500 ರಿಂದ ₹13,500 ವರೆಗೆ ವಿದ್ಯಾರ್ಥಿವೇತನ! SSP Scholarship 2026-27 Apply Online

ಯೋಜನೆಯ ಮುಖ್ಯ ಉದ್ದೇಶಗಳು:

  • ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉತ್ತೇಜನ ನೀಡುವುದು.
  • ಪೋಷಕರ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು.
  • ಶಾಲೆಯಿಂದ ಹೊರಗುಳಿಯುವ (ಶಾಲೆ ಬಿಡುವ) ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡುವುದು.
  • ಸಾರ್ವಜನಿಕ ಸಾರಿಗೆ ಬಳಕೆಯ ಬಗ್ಗೆ ಜನರಿಗೆ ಮನವರಿಕೆ ಮಾಡುವುದು.

ಈ ಯೋಜನೆಯ ಮುಖ್ಯ ಉದ್ದೇಶ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆ ಆಗಬಾರದು ಹಾಗೂ ಅವರು ಸರಿಯಾದ ಸಮಯಕ್ಕೆ ಶಾಲಾ-ಕಾಲೇಜುಗಳಿಗೆ ಹಾಜರಾಗಬೇಕು ಎಂಬುದೇ ಆಗಿದೆ.

Free Bus Pass 2026: ಯೋಜನೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

ಈ ಯೋಜನೆಗೆ ಬಡವ ಮತ್ತು ಶ್ರೀಮಂತ ಎನ್ನದೆ ಅರ್ಹತೆ ಇರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಬಸ್ ಪಾಸ್ ಅರ್ಜಿಯನ್ನು ಸಲ್ಲಿಸಬಹುದು:

  • ಸರ್ಕಾರಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು.
  • ಅನುದಾನಿತ (Aided) ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು.
  • ವೃತ್ತಿಪರ ಹಾಗೂ ತಾಂತ್ರಿಕ ಕೋರ್ಸ್ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಈಗಾಗಲೇ ಬಸ್ ಪಾಸ್ ಅರ್ಜಿ ಶುಲ್ಕವನ್ನು ಪಾವತಿಸಿದವರು ಏನು ಮಾಡಬೇಕು? (Refund Rules)

ಈ ಆದೇಶ ಜಾರಿಯಾಗುವ ಮೊದಲೇ, ಅಂದರೆ 29 ಮೇ 2026ರ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಬಸ್ ಪಾಸ್ ಪಡೆದ ವಿದ್ಯಾರ್ಥಿಗಳು ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಏಕೆಂದರೆ ಹಣ ಮರಳಿ ನೀಡುವ (Refund) ಕುರಿತು ಇಲಾಖೆಯು ಸ್ಪಷ್ಟ ಮಾಹಿತಿ ನೀಡಿದೆ. ಅರ್ಜಿ ಶುಲ್ಕ ಪಾವತಿ ಮಾಡಿದ ಅಭ್ಯರ್ಥಿಗಳಿಗೆ 15 ದಿನಗಳ ಒಳಗಾಗಿ ಹಣವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಲಾಗುವುದು ಎಂದು ಕರ್ನಾಟಕ ಸಾರಿಗೆ ನಿಗಮ ಸ್ಪಷ್ಟಪಡಿಸಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲಾತಿಗಳು (Documents Required)

ವಿದ್ಯಾರ್ಥಿಗಳು ಉಚಿತ ಬಸ್ ಪಾಸ್ ಪಡೆಯಲು ಕೆಲವು ಪ್ರಮುಖ ದಾಖಲೆಗಳನ್ನು ಹೊಂದಿರಬೇಕು:

  1. ಅಭ್ಯರ್ಥಿಯ ಕಡ್ಡಾಯ ಆಧಾರ್ ಕಾರ್ಡ್ (Aadhaar Card).
  2. ಶಾಲಾ ಹಾಗೂ ಕಾಲೇಜಿನಲ್ಲಿ ಪ್ರವೇಶ ಪಡೆದ ಅರ್ಜಿ ಶುಲ್ಕದ ರಶೀದಿ (Fee Receipt) ಅಥವಾ ಐಡಿ ಕಾರ್ಡ್.
  3. ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಭಾವಚಿತ್ರ.

ಈ ಎಲ್ಲ ದಾಖಲೆಗಳನ್ನು ಸಲ್ಲಿಸಿದ ಬಳಿಕ ಇಲಾಖೆಯು ಪರಿಶೀಲಿಸಿ ನಿಮಗೆ ಬಸ್ ಪಾಸ್ ವಿತರಣೆ ಮಾಡುತ್ತದೆ.

ಉಚಿತ ಬಸ್ ಪಾಸ್ಗೆ ಅರ್ಜಿ ಸಲ್ಲಿಸುವುದು ಹೇಗೆ? (How to Apply)

ವಿದ್ಯಾರ್ಥಿಗಳು ಉಚಿತ ಬಸ್ ಪಾಸ್‌ಗಾಗಿ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು:

  • ಆಫ್ಲೈನ್ ವಿಧಾನ: ನೀವು ಪ್ರವೇಶ ಪಡೆದ ಶಾಲಾ ಹಾಗೂ ಕಾಲೇಜಿನಲ್ಲಿ ಹೆಡ್‌ಮಾಸ್ಟರ್ (Headmaster) ಅಥವಾ ಪ್ರಿನ್ಸಿಪಾಲ್ (Principal) ಅವರನ್ನು ಭೇಟಿಯಾಗಿ ಅಗತ್ಯ ದಾಖಲೆಗಳನ್ನು ಅವರಿಗೆ ನೀಡಿ ಅರ್ಜಿ ಸಲ್ಲಿಸಬಹುದು.
  • ಆನ್ಲೈನ್ ವಿಧಾನ: ಅಥವಾ ನೀವೇ ಖುದ್ದಾಗಿ Seva Sindhu, Karnataka One, Grama One ಇತರೆ ಆನ್‌ಲೈನ್ ಪೋರ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಮುಖ್ಯ ಸೂಚನೆ ಏನೆಂದರೆ, ಅಭ್ಯರ್ಥಿಗಳು ಇದೇ ತಿಂಗಳ ಒಳಗಾಗಿ ಅರ್ಜಿಯನ್ನು ಸಲ್ಲಿಸುವುದು ಒಳಿತು.

ಉಚಿತ ಬಸ್ ಪಾಸ್ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಆಗುವ ಲಾಭಗಳು

  • ಸರಿಯಾದ ಸಮಯಕ್ಕೆ ಶಾಲಾ-ಕಾಲೇಜುಗಳಿಗೆ ಹಾಜರಾಗಬಹುದು.
  • ಪ್ರಯಾಣಕ್ಕೆ ಯಾವುದೇ ರೀತಿಯ ಹಣ ನೀಡುವ ಅವಶ್ಯಕತೆ ಇರುವುದಿಲ್ಲ.
  • ವಿದ್ಯಾರ್ಥಿಯ ಹಾಜರಾತಿ ಮಟ್ಟದಲ್ಲಿ (Attendance) ಭಾರಿ ಏರಿಕೆಯಾಗುತ್ತದೆ.
  • ಪೋಷಕರಿಗೆ ಆರ್ಥಿಕ ನೆರವು ಮತ್ತು ಸಹಾಯ ದೊರೆಯುತ್ತದೆ.

ಸರ್ಕಾರ ಯೋಜನೆ ಜಾರಿಗೆ ತರಲು ಕಾರಣವೇನು?

ರಾಜ್ಯ ಸರ್ಕಾರವು ಈಗಾಗಲೇ ಹಲವಾರು ರೀತಿಯ ಜನಪರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಉದಾಹರಣೆಗೆ ಗೃಹಲಕ್ಷ್ಮಿ ಯೋಜನೆ, ಗೃಹಜ್ಯೋತಿ ಯೋಜನೆ ಹಾಗೂ ಶಕ್ತಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಸರ್ಕಾರವು ಜನಪ್ರಿಯವಾಗಿದೆ. ಇದರ ಮುಂದುವರಿದ ಭಾಗವಾಗಿ ಬಡ ಕುಟುಂಬದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಮತ್ತು ಉಪಯೋಗವಾಗಲಿ ಎಂದು ಸರ್ಕಾರವು ಈ ಮಹತ್ವದ ಯೋಜನೆಯನ್ನು ವಿಸ್ತರಿಸಿದೆ.

Apply Link: Click

ಕೊನೆಯ ಮಾತು (Conclusion)

ಕರ್ನಾಟಕ ಸರ್ಕಾರವು ಇದೇ ಮೊದಲ ಬಾರಿಗೆ ಗಂಡು ಮಕ್ಕಳಿಗೂ ಸೇರಿಸಿ ಈ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ವಿಸ್ತರಿಸಿದೆ. ಮೊದಲು ಈ ಯೋಜನೆಯ ಲಾಭವನ್ನು ಕೇವಲ ವಿದ್ಯಾರ್ಥಿನಿಯರು ಮಾತ್ರ ಪಡೆಯುತ್ತಿದ್ದರು, ಆದರೆ ಈಗ ವಿದ್ಯಾರ್ಥಿಗಳು ಸಹ ಇದರ ಲಾಭವನ್ನು ಪಡೆಯಬಹುದು. ಸರ್ಕಾರದ ಈ ಯೋಜನೆಯ ಕುರಿತು ನಿಮ್ಮ ಅನಿಸಿಕೆಯನ್ನು ಕೆಳಗೆ ಕಮೆಂಟ್ ಮಾಡಿ ಹಾಗೂ ಈ ಉಪಯುಕ್ತ ಮಾಹಿತಿಯನ್ನು ನಿಮ್ಮೆಲ್ಲಾ ಸ್ನೇಹಿತರಿಗೆ ಶೇರ್ ಮಾಡಿ.

 

Leave a Comment