KRIES Teacher Recruitment 2026: 1087 Teacher ಹುದ್ದೆಗಳ ಭರ್ಜರಿ ನೇಮಕಾತಿ! Degree/B.Ed ಅಭ್ಯರ್ಥಿಗಳಿಗೆ ಸುವರ್ಣಾವಕಾಶ

KRIES Teacher Recruitment 2026: 1087 ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆರಂಭ! ಈ ಅವಕಾಶ ಮಿಸ್ ಮಾಡಿಕೊಳ್ಳಬೇಡಿ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇಲಾಖೆ ನೇಮಕಾತಿ 2026 ಇಲಾಖೆಯಲ್ಲಿ ಖಾಲಿ ಇರುವ 1087 ಶಿಕ್ಷಕರ ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಆಯ್ಕೆಯಾದ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಮಾಸಿಕವಾಗಿ 49,050 ರಿಂದ 99400 ವೇತನ ನಿಗದಿಪಡಿಸಲಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಮತ್ತು ಅರ್ಹತೆ ಪಡೆದ ಅಭ್ಯರ್ಥಿಗಳು ಮಾಹಿತಿಯನ್ನು ಪೂರ್ತಿಯಾಗಿ ನೋಡಿ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿಯಾದ ವೇತನ ಶ್ರೇಣಿ ವಿವರಣೆ, ಆಯ್ಕೆ ವಿಧಾನ, ಅರ್ಜಿ ಸಲ್ಲಿಸುವ ವಿಧಾನ ಇಂತಹ ಹಲವಾರು ವಿಷಯವನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

KRIES Teacher Recruitment 2026 – ಪ್ರಮುಖ ವಿವರಣೆ (Overview)

ನೇಮಕಾತಿ ಇಲಾಖೆ ಹೆಸರು:
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KRIES Teacher Recruitment 2026)

ಹುದ್ದೆಗಳ ಹೆಸರು:
• ಶಿಕ್ಷಕರು

WhatsApp Channel Join Now
Telegram Group Join Now
ಹುದ್ದೆಯ ಹೆಸರು (Subject) ಹುದ್ದೆಗಳ ಸಂಖ್ಯೆ (Vacancies) ಶೈಕ್ಷಣಿಕ ವಿದ್ಯಾರ್ಹತೆ (Qualification)
ಕನ್ನಡ ಶಿಕ್ಷಕರು 165 ಸಂಬಂಧಿಸಿದ ಪದವಿ (Graduation) + B.Ed + TET/CTET
ಇಂಗ್ಲಿಷ್ ಶಿಕ್ಷಕರು 177 ಸಂಬಂಧಿಸಿದ ಪದವಿ (Graduation) + B.Ed + TET/CTET
ಹಿಂದಿ ಶಿಕ್ಷಕರು 86 ಹಿಂದಿ ಪದವಿ + B.Ed + ಕನ್ನಡ ಜ್ಞಾನ + TET/CTET
ಗಣಿತ ಶಿಕ್ಷಕರು 138 B.Sc (Maths) + B.Ed + TET/CTET Paper-2
ವಿಜ್ಞಾನ ಶಿಕ್ಷಕರು 138 B.Sc (Science) + B.Ed + TET/CTET Paper-2
ಸಮಾಜ ವಿಜ್ಞಾನ ಶಿಕ್ಷಕರು 178 ಸಂಬಂಧಿಸಿದ ಪದವಿ + B.Ed + TET/CTET
ಕಂಪ್ಯೂಟರ್ ಶಿಕ್ಷಕರು 57 BCA / B.Sc (Computer Science / IS) + B.Ed
ದೈಹಿಕ ಶಿಕ್ಷಣ ಶಿಕ್ಷಕರು (PE) 81 ಯಾವುದೇ ಪದವಿ + B.P.Ed
ಚಿತ್ರಕಲೆ ಶಿಕ್ಷಕರು (Drawing) 17 ಸಂಬಂಧಿಸಿದ ಪದವಿ / ಡಿಪ್ಲೊಮಾ
ಒಟ್ಟು ಹುದ್ದೆಗಳು 1,087

 

ಒಟ್ಟು ಹುದ್ದೆಗಳ ಸಂಖ್ಯೆ:
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇಲಾಖೆಯಲ್ಲಿ ಒಟ್ಟು 1087 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳು ನಮ್ಮ ಕರ್ನಾಟಕದಲ್ಲಿ ‌ಖಾಲಿ ಇರುವುದರಿಂದ ಆಸಕ್ತಿ ಹಾಗೂ ಅರ್ಹತೆ ಪಡೆದ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಉದ್ಯೋಗದ ಸ್ಥಳ: ಕರ್ನಾಟಕ

Also Read 📢 : 2314 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳು! PUC ಪಾಸ್ ಇದ್ದರೆ ₹76,100 ಸಂಬಳದ ಸರ್ಕಾರಿ ಉದ್ಯೋಗ

KRIES Teacher Recruitment 2026 – ಸಂಬಳದ ಮಾಹಿತಿ (Salary Details)

ವೇತನ ಶ್ರೇಣಿ:
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇಲಾಖೆಯ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ಇಲಾಖೆಯ ನಿಯಮಗಳ ಅನುಸಾರ 49050 ರಿಂದ 99400/- ತಿಂಗಳಿಗೆ ವೇತನ ನೀಡಲಾಗುತ್ತದೆ.

ಮುಖ್ಯ ಸೂಚನೆ:
ನಾವು ನೀಡುವ ಪ್ರತಿಯೊಂದು ಉದ್ಯೋಗದ ಮಾಹಿತಿಯು ಉಚಿತವಾಗಿದ್ದು ನಾವು ನೀಡುವ ಮಾಹಿತಿಗೆ ಯಾವುದೇ ರೀತಿಯ ಹಣವನ್ನು ಕೇಳುವುದಿಲ್ಲ. jobsexplain.com ಈ website ಕರ್ನಾಟಕದ ಅಭ್ಯರ್ಥಿಗಳಿಗೆ ಹಾಗೂ ಉದ್ಯೋಗ ಬಯಸುವ ವಿದ್ಯಾರ್ಥಿಗಳಿಗೆ ಉಚಿತವಾದ ಉದ್ಯೋಗ ಮಾಹಿತಿ ನೀಡುವ website. ಒಂದು ವೇಳೆ ನಮ್ಮ ಹೆಸರಿನಲ್ಲಿ ಯಾರಾದರೂ ಹಣ ಪಾವತಿ ಮಾಡಲು ನಿಮಗೆ WhatsApp ಅಥವಾ Instagram ಮುಂತಾದ ಸೋಶಿಯಲ್ ಪ್ಲಾಟ್ಫಾರ್ಮ್‌ಗಳ ಮೂಲಕ ಹಣ ಪಾವತಿ ಮಾಡಲು ಹೇಳಿದರೆ ದಯವಿಟ್ಟು ಹಣವನ್ನು ನೀಡಬೇಡಿ‌. ಈ ಕುರಿತು ನಮಗೆ ತಿಳಿಸಿ ನಮ್ಮ ವಾಟ್ಸಾಪ್ ನಂಬರ್ : 8050798925 ಹೆಚ್ಚಿನ ಮಾಹಿತಿಗಾಗಿ ವಾಟ್ಸಾಪ್ ಮೂಲಕ ನಮ್ಮನ್ನು ಸಂಪರ್ಕಿಸಿ ಹಾಗೂ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮುಂಚೆ ನಾವು ಕೆಳಗಡೆ ನೀಡಿರುವ ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಸ್ಪಷ್ಟವಾಗಿ ಓದಿ ತದನಂತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.

KRIES Teacher Recruitment 2026 – ಶೈಕ್ಷಣಿಕ ಅರ್ಹತೆಗಳು (Qualification)

ಶೈಕ್ಷಣಿಕ ವಿದ್ಯಾರ್ಹತೆ:
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ ಹುದ್ದೆಗಳಿಗೆ ಅನುಗುಣವಾಗಿ ಶೈಕ್ಷಣಿಕ ಅರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದು‌.

ಕನ್ನಡ ಭಾಷಾ ಶಿಕ್ಷಕರು: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯನ್ನು ಒಂದು ಐಚ್ಛಿಕ ವಿಷಯವನ್ನಾಗಿ ಓದಿ, ಕಲಾ ವಿಭಾಗದಲ್ಲಿ ಸ್ನಾತಕ (Degree) ಪದವಿ ಪಡೆದಿರಬೇಕು. ಅಥವಾ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ 4 ವರ್ಷಗಳ “ಕನ್ನಡ ಪಂಡಿತ್” ಕೋರ್ಸ್‌ನಲ್ಲಿ ಉತ್ತೀರ್ಣರಾಗಿರಬೇಕು. ಮತ್ತು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನ್ನಡ ಬಿ.ಇಡ್ (B.Ed) ಪದವಿ ಹೊಂದಿರಬೇಕು ಅಥವಾ ಸ್ನಾತಕ ಪದವಿಯಲ್ಲಿ ಕನ್ನಡವನ್ನು ಐಚ್ಛಿಕ ವಿಷಯವಾಗಿ ಅಭ್ಯಸಿಸದಿದ್ದಲ್ಲಿ, ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ (Post Graduation) ಪದವಿ ಪಡೆದಿರಬೇಕು.

ಆಂಗ್ಲ ಭಾಷಾ ಶಿಕ್ಷಕರು: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಭಾಷೆಯನ್ನು ಒಂದು ಐಚ್ಛಿಕ ವಿಷಯವನ್ನಾಗಿ ಅಭ್ಯಸಿಸಿ, ಕಲಾ ವಿಭಾಗದಲ್ಲಿ ಸ್ನಾತಕ ಪದವಿ ಪಡೆದಿರಬೇಕು. ಅಥವಾ ದಕ್ಷಿಣ ಭಾರತದ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪ್ರಮಾಣ ಪತ್ರ ಕೋರ್ಸ್‌ನಲ್ಲಿ ಉತ್ತೀರ್ಣರಾಗಿರಬೇಕು. ಮತ್ತು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪ್ರಮುಖವಾಗಿ ಇಂಗ್ಲಿಷ್ ಬೋಧನಾ ಪದ್ಧತಿ (Methods)ಯಲ್ಲಿ ಬಿ.ಇಡ್ (B.Ed) ಪದವಿ ಪಡೆದಿರಬೇಕು. (ಸ್ನಾತಕದಲ್ಲಿ ಇಂಗ್ಲಿಷ್ ಐಚ್ಛಿಕ ವಿಷಯವಾಗಿರದಿದ್ದರೆ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು). ಕನ್ನಡ ಭಾಷಾ ಜ್ಞಾನ: SSLC/PUC/ಪದವಿ ಅಥವಾ ಸ್ನಾತಕೋತ್ತರ ಪದವಿಯಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಅಭ್ಯಸಿಸಿರಬೇಕು ಅಥವಾ ತತ್ಸಮಾನ ಕನ್ನಡ ಪರೀಕ್ಷೆಗಳಲ್ಲಿ (ಕಾವ/ಜಾಣ/ರತ್ನ/ಡಿಪ್ಲೊಮಾ) ಉತ್ತೀರ್ಣರಾಗಿರಬೇಕು.

ಹಿಂದಿ ಭಾಷಾ ಶಿಕ್ಷಕರು:: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹಿಂದಿ ಭಾಷೆಯನ್ನು ಒಂದು ಐಚ್ಛಿಕ ವಿಷಯವನ್ನಾಗಿ ಕಲಾ ವಿಭಾಗದಲ್ಲಿ ಸ್ನಾತಕ ಪದವಿ ಪಡೆದಿರಬೇಕು. ಮತ್ತು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಇಡ್ (B.Ed) ಪದವಿ ಪಡೆದಿರಬೇಕು. ಗಮನಿಸಿ: ಪದವಿಯಲ್ಲಿ ಹಿಂದಿ ಐಚ್ಛಿಕ ವಿಷಯವಾಗಿ ಅಧ್ಯಯನ ಮಾಡದಿದ್ದರೆ, ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದು, ಪದವಿಯಲ್ಲಿ ಹಿಂದಿಯನ್ನು ಪ್ರಮುಖ (Major) ವಿಷಯವಾಗಿ ಆಯ್ಕೆ ಮಾಡಿಕೊಂಡಿರಬೇಕು ಮತ್ತು ಹಿಂದಿ ಬೋಧನಾ ವಿಷಯದೊಂದಿಗೆ ಬಿ.ಇಡ್ ಮಾಡಿರಬೇಕು ಆಂಗ್ಲ ಶಿಕ್ಷಕರಂತೆಯೇ ಇವರಿಗೂ ಕಡ್ಡಾಯ ಕನ್ನಡ ಭಾಷಾ ಜ್ಞಾನದ ಅವಶ್ಯಕತೆ ಇರುತ್ತದೆ.

ಗಣಿತ ಶಿಕ್ಷಕರು: ಗಣಿತ ಮತ್ತು ಭೌತಶಾಸ್ತ್ರ (Physics) ಕಡ್ಡಾಯ ವಿಷಯಗಳೊಂದಿಗೆ ವಿಜ್ಞಾನ ವಿಭಾಗದಲ್ಲಿ ಸ್ನಾತಕ ಪದವಿ (B.Sc) ಪಡೆದಿರಬೇಕು ಮತ್ತು ಇದರೊಂದಿಗೆ ರಸಾಯನಶಾಸ್ತ್ರ/ಗಣಕವಿಜ್ಞಾನ ಇತ್ಯಾದಿಗಳಲ್ಲಿ ಯಾವುದೇ ಒಂದನ್ನು ಐಚ್ಛಿಕ ವಿಷಯವಾಗಿ ಅಭ್ಯಸಿಸಿರಬೇಕು. ಮತ್ತು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಿಜ್ಞಾನ ಪದ್ಧತಿ (Method) ಯಲ್ಲಿ ಬಿ.ಇಡ್ (B.Ed) ಪದವಿ ಪಡೆದಿರಬೇಕು.

ವಿಜ್ಞಾನ ಶಿಕ್ಷಕರು: ಕಡ್ಡಾಯವಾಗಿ ರಸಾಯನಶಾಸ್ತ್ರ (Chemistry) ವಿಷಯದೊಂದಿಗೆ ಸಸ್ಯಶಾಸ್ತ್ರ (Botany) ಅಥವಾ ಪ್ರಾಣಿಶಾಸ್ತ್ರ (Zoology) ವಿಷಯಗಳನ್ನು ಐಚ್ಛಿಕವಾಗಿ ತೆಗೆದುಕೊಂಡು ವಿಜ್ಞಾನದಲ್ಲಿ ಸ್ನಾತಕ ಪದವಿ (B.Sc) ಪಡೆದಿರಬೇಕು. ಮತ್ತು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಿಜ್ಞಾನ ವಿಷಯದ ಪದ್ಧತಿಯಲ್ಲಿ ಬಿ.ಇಡ್ (B.Ed) ಪದವಿ ಪಡೆದಿರಬೇಕು. ಕಡ್ಡಾಯ ಕನ್ನಡ ಭಾಷಾ ಅರ್ಹತೆ ಹೊಂದಿರಬೇಕು.

ಸಮಾಜ ವಿಜ್ಞಾನ ಶಿಕ್ಷಕರು: ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಮತ್ತು ಭೂಗೋಳಶಾಸ್ತ್ರ ವಿಷಯಗಳಲ್ಲಿ ಯಾವುದೇ ಎರಡು ವಿಷಯಗಳನ್ನು ಐಚ್ಛಿಕವಾಗಿ ತೆಗೆದುಕೊಂಡು ಕಲಾ ವಿಭಾಗದಲ್ಲಿ ಸ್ನಾತಕ ಪದವಿ (B.A) ಪಡೆದಿರಬೇಕು. ಮತ್ತು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಲಾ ವಿಭಾಗದ ಪದ್ಧತಿ (Arts Method) ಯಲ್ಲಿ ಬಿ.ಇಡ್ (B.Ed) ಪದವಿ ಪಡೆದಿರಬೇಕು. ಕಡ್ಡಾಯ ಕನ್ನಡ ಭಾಷಾ ಅರ್ಹತೆ ಹೊಂದಿರಬೇಕು. ಸೂಚನೆ: ವಸತಿ ಶಾಲೆಗಳು ಆಂಗ್ಲ ಮಾಧ್ಯಮದಲ್ಲಿ ಇರುವುದರಿಂದ ಸಮಾಜ ವಿಜ್ಞಾನ ಶಿಕ್ಷಕರು ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ಬಗ್ಗೆ ಸಂಬಂಧಪಟ್ಟ ವಿಶ್ವವಿದ್ಯಾಲಯ/ಕಾಲೇಜಿನಿಂದ ದೃಢೀಕೃತ ಪತ್ರ ಹಾಜರುಪಡಿಸಬೇಕು.

ದೈಹಿಕ ಶಿಕ್ಷಣ ಶಿಕ್ಷಕರು: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಸ್ನಾತಕ ಪದವಿ (Degree) ಪಡೆದಿರಬೇಕು. ಮತ್ತು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ದೈಹಿಕ ಶಿಕ್ಷಣ ಸ್ನಾತಕ ಪದವಿ (B.P.Ed) ಪಡೆದಿರಬೇಕು. ಕಡ್ಡಾಯ ಕನ್ನಡ ಭಾಷಾ ಅರ್ಹತೆ ಹೊಂದಿರಬೇಕು.

ಪದವೀಧರ ಚಿತ್ರಕಲಾ ಶಿಕ್ಷಕರು: ಲಲಿತ ಕಲೆ ವಿಷಯದಲ್ಲಿ ಸ್ನಾತಕ ಪದವಿ (B.F.A) ಪಡೆದಿರಬೇಕು. ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ದೃಶ್ಯಕಲೆಯಲ್ಲಿ ಸ್ನಾತಕ ಪದವಿ (B.V.A) ಪಡೆದಿರಬೇಕು. ಅಥವಾ ತಾಂತ್ರಿಕ ಪರೀಕ್ಷಾ ಮಂಡಳಿಯಿಂದ ನಡೆಸಲಾಗುವ ಮುಖ್ಯ ಕಲಾ ಪರೀಕ್ಷೆಯ (Art Master) ರೇಖಾಚಿತ್ರ ಮತ್ತು ಚಿತ್ರಕಲೆಯಲ್ಲಿ ಡಿಪ್ಲೊಮಾ ಅಥವಾ ತತ್ಸಮಾನ ಅಂಗೀಕೃತ ವಿದ್ಯಾರ್ಹತೆ ಹೊಂದಿರಬೇಕು. ಕಡ್ಡಾಯ ಕನ್ನಡ ಭಾಷಾ ಅರ್ಹತೆ ಹೊಂದಿರಬೇಕು.

ಡಿಪ್ಲೊಮಾ ಚಿತ್ರಕಲಾ ಶಿಕ್ಷಕರು: ಚಿತ್ರಕಲೆಯಲ್ಲಿ ಡಿಪ್ಲೊಮಾ/ವಾಣಿಜ್ಯದಲ್ಲಿ ಡಿಪ್ಲೊಮಾ/ಅನ್ವಯಿಕ ಕಲೆ ಅಥವಾ ಅಂಗೀಕೃತ ವಿಶ್ವವಿದ್ಯಾಲಯಗಳಿಂದ ವಿಶೇಷ ಪರಿಣತಿ ಹೊಂದಿದ ಚಿತ್ರಕಲೆಯಲ್ಲಿ ಡಿಪ್ಲೊಮಾ ಹೊಂದಿರಬೇಕು. ಕಡ್ಡಾಯ ಕನ್ನಡ ಭಾಷಾ ಅರ್ಹತೆ ಹೊಂದಿರಬೇಕು.

KRIES Teacher Recruitment 2026 – ವಯೋಮಿತಿ ವಿವರಣೆ (Age Limit)

ವಯೋಮಿತಿ:
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ಗರಿಷ್ಠ ವಯೋಮಿತಿ 50 ವರ್ಷ ನಿಗದಿಪಡಿಸಲಾಗಿರುತ್ತದೆ. ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲಾಖೆಯ ಅಧಿಕೃತ ಅಧಿಸೂಚನೆ ಗಮನಿಸಿ.

ವಯೋಮಿತಿ ಸಡಿಲಿಕೆ ವಿವರಣೆ:
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇಲಾಖೆಯ ನಿಯಮಗಳ ಅನ್ವಯ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ಬೇಕಾದಲ್ಲಿ ನಾವು ನೀಡಿರುವ ಅಧಿಸೂಚನೆಯನ್ನು ಗಮನಿಸಿ.

KRIES Teacher Recruitment 2026 – ಅರ್ಜಿ ಶುಲ್ಕ (Application Fee)

ಅರ್ಜಿ ಶುಲ್ಕ:
• ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: 750/-
• 2A/2B/3A/3B ವರ್ಗದ ಅಭ್ಯರ್ಥಿಗಳಿಗೆ: 750/-
• ಪರಿಶಿಷ್ಟ ಜಾತಿ ಹಾಗೂ ಪಂಗಡ ಅಭ್ಯರ್ಥಿಗಳಿಗೆ: 500/-
• ಅಂಗವಿಕಲ ಅಭ್ಯರ್ಥಿಗಳಿಗೆ: 250/

KRIES Teacher Recruitment 2026 – ಆಯ್ಕೆ ವಿಧಾನ (Selection Process)

ಆಯ್ಕೆ ವಿಧಾನ:
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯ ನಿಯಮಗಳ ಅನುಸಾರ ಹುದ್ದೆಗಳಿಗೆ ಅನುಗುಣವಾಗಿ ಲಿಖಿತ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ದಾಖಲಾತಿ ಪರಿಶೀಲನೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

KRIES Teacher Recruitment 2026 – Online ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? (How to Apply)

ಅರ್ಜಿ ಸಲ್ಲಿಸುವ ವಿಧಾನ:
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು Online ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿ ಸಲ್ಲಿಸುವ ಮೊದಲು ಕೆಳಗಡೆ ನೀಡಿರುವ ಕೆಲವಷ್ಟು ಮಾಹಿತಿಗಳನ್ನು ಸರಿಯಾಗಿ ಗಮನಿಸಿ.

ಮೊದಲನೇ ಹಂತ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದಯವಿಟ್ಟು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಹುದ್ದೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸರಿಯಾಗಿ ಗಮನಿಸಿ.

ಎರಡನೇ ಹಂತ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ತಿಳಿದುಕೊಂಡು ಬಳಿಕ ಅಭ್ಯರ್ಥಿಗಳು ನೀವು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದೀರಾ ಎಂಬುದನ್ನ ಖಚಿತ ಪಡಿಸಿಕೊಂಡು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾಗಿ.

ಮೂರನೇ ಹಂತ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಸಂಬಂಧಿಸಿದ ಶೈಕ್ಷಣಿಕ ಮಾಹಿತಿಗಳ ಅಂಕಪಟ್ಟಿಗಳನ್ನು ನೀವು ಹೊಂದಿದ್ದೀರಾ ಎಂಬುದನ್ನು ಗಮನಿಸಿಕೊಳ್ಳಿ ಏಕೆಂದರೆ ಏನಾದರೂ ತಪ್ಪುಗಳಾದರೆ ಬದಲಾಯಿಸುವುದು ಕಷ್ಟವಾಗುತ್ತದೆ.

ನಾಲ್ಕನೇ ಹಂತ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಲ್ಲಿ ಕಾಣುವ ಪರದೆಯ ಮೇಲೆ ನಿಮ್ಮ ಹೆಸರು, ನಿಮ್ಮ ಮೊಬೈಲ್ ನಂಬರ್, ನಿಮ್ಮ ವಿಳಾಸ ಹಾಗೂ ಇಮೇಲ್ ಐಡಿ ಸರಿಯಾಗಿ ನಮೂದಿಸಿ ಏಕೆಂದರೆ ಸಂವಹನ ಉದ್ದೇಶದಿಂದ ಇವುಗಳು ಉಪಯೋಗಕಾರಿಯಾಗಿರುತ್ತವೆ.

ಐದನೇ ಹಂತ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಬಳಿಕ ನೀವು ನೀಡಿದ ಮಾಹಿತಿಯು ಸರಿಯಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿಕೊಳ್ಳಿ ಉದಾಹರಣೆಗೆ ನಿಮ್ಮ ಹೆಸರು, ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ವಿಳಾಸ ಇವುಗಳು ಸರಿಯಾಗಿದ್ದರೆ ಅರ್ಜಿ ಸಲ್ಲಿಸಿ ಎಂಬುವುದರ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನ ಸಂಪೂರ್ಣವಾಗಿ ಸಲ್ಲಿಸಿ, ಬಳಿಕ ಕಂಪ್ಯೂಟರ್ ಪರದೆಯ ಮೇಲೆ ಕಾಣುವ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಬಳಿ ಇಟ್ಟುಕೊಳ್ಳಿ.

KRIES Teacher Recruitment 2026 – ಪ್ರಮುಖ ದಿನಾಂಕಗಳು (important dates)

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 15-07-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13-08-2026

(ಒಂದು ವೇಳೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇಲಾಖೆಯ ನೋಟಿಫಿಕೇಶನ್ ಲಿಂಕ್ ಡೌನ್ಲೋಡ್ ಆಗದಿದ್ದರೆ ನಮ್ಮ ವಾಟ್ಸಪ್ ನಂಬರ್ 8050798925‌ ಈ ನಂಬರಿಗೆ ಮೆಸೇಜ್ ಮಾಡಿ)

KRIES Teacher Recruitment 2026 – ಪ್ರಮುಖ ಲಿಂಕ್ ಗಳು (Important Links)

Apply Link Click
Notification (KK)

Notification (RPC)

Click

Click

Telegram Join Link Click
WhatsApp channel Click
App Link Click

 

ಮುಖ್ಯವಾದ ಮಾಹಿತಿ:
ಪ್ರಿಯ ಸ್ನೇಹಿತರೆ, ನಾವು ನೀಡಿರುವ ಈ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇಲಾಖೆಯ ಈ ಉದ್ಯೋಗದ ಮಾಹಿತಿ ಇಷ್ಟವಾಗಿದ್ದರೆ ದಯವಿಟ್ಟು ಮಾಹಿತಿ ಓದಿ ಸುಮ್ಮನಾಗಬೇಡಿ ಆದಷ್ಟು ಈ ಮಾಹಿತಿಯನ್ನ ಇತರರೊಂದಿಗೆ ಹಂಚಿಕೊಳ್ಳಿ ಇದು ಇನ್ನೊಬ್ಬರ ಭವಿಷ್ಯವನ್ನು ರೂಪಿಸುವ ಮಾಹಿತಿಯಾಗುತ್ತದೆ. ಹಾಗೆ ಈ ಮಾಹಿತಿ ಇಷ್ಟವಾಗಿದ್ದರೆ ನಿಮ್ಮ Facebook group ಮತ್ತು WhatsApp group ಹಾಗೂ telegram ಮೂಲಕ ಹಂಚಿಕೊಳ್ಳಿ.

Leave a Comment