12th & ಪದವಿ ಪಾಸ್ಗೆ 191 ರೈಲ್ವೆ ಹುದ್ದೆಗಳು! ₹44,900 ಸಂಬಳ | RRB Isolated Category Recruitment 2026
ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (RRB) ನೇಮಕಾತಿ 2026 ಖಾಲಿ ಇರುವ ಚೀಫ್ ಲಾ ಅಸಿಸ್ಟೆಂಟ್, ಪಬ್ಲಿಕ್ ಪ್ರಾಸಿಕ್ಯೂಟರ್, ಸೀನಿಯರ್ ಪಬ್ಲಿಸಿಟಿ ಇನ್ಸ್ಪೆಕ್ಟರ್, ಜೂನಿಯರ್ ಟ್ರಾನ್ಸ್ಲೇಟರ್, ಸ್ಟಾಫ್ & ವೆಲ್ಫೇರ್ ಇನ್ಸ್ಪೆಕ್ಟರ್, ಸೈಂಟಿಫಿಕ್ ಅಸಿಸ್ಟೆಂಟ್ ಹಾಗೂ ಲ್ಯಾಬ್ ಅಸಿಸ್ಟೆಂಟ್ ಹುದ್ದೆಗಳಿಗೆ 12ನೇ ತರಗತಿ (ಪಿಯುಸಿ), ಪದವಿ ಹಾಗೂ ಸ್ನಾತಕೋತ್ತರ ಪದವಿ ಪಾಸಾದ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಭಾರತೀಯ ರೈಲ್ವೆಯಲ್ಲಿ ಒಟ್ಟು 191 ಹುದ್ದೆಗಳು ಖಾಲಿ ಇದ್ದು ಈ ಅವಕಾಶವನ್ನು ಯಾರು ಸಹ ಮಿಸ್ ಮಾಡಿಕೊಳ್ಳದೆ ಅರ್ಜಿಯನ್ನು ಸಲ್ಲಿಸಿ. ಕರ್ನಾಟಕ (RRB ಬೆಂಗಳೂರು ಸೇರಿದಂತೆ) ಹಾಗೂ ದೇಶಾದ್ಯಂತ ಉದ್ಯೋಗ ಹುಡುಕುತ್ತಿರುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಹುದ್ದೆಗಳಿಗೆ ನಿಗದಿಪಡಿಸಿದ ಇನ್ನಷ್ಟು ಹೆಚ್ಚಿನ ಮಾಹಿತಿಯಾದ ಶೈಕ್ಷಣಿಕ ವಿದ್ಯಾರ್ಹತೆ/ಆಯ್ಕೆ ವಿಧಾನ/ಪ್ರಮುಖ ದಿನಾಂಕಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ.
RRB Isolated Category Recruitment 2026 – ಪ್ರಮುಖ ವಿವರಣೆ (Overview)
ನೇಮಕಾತಿ ಇಲಾಖೆ ಹೆಸರು: ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (RRB Isolated Category Recruitment Boards – RRB)
ಹುದ್ದೆಗಳ ಹೆಸರು:
- ಚೀಫ್ ಲಾ ಅಸಿಸ್ಟೆಂಟ್ (Chief Law Assistant) – 17 ಹುದ್ದೆಗಳು
- ಪಬ್ಲಿಕ್ ಪ್ರಾಸಿಕ್ಯೂಟರ್ (Public Prosecutor) – 21 ಹುದ್ದೆಗಳು
- ಸೀನಿಯರ್ ಪಬ್ಲಿಸಿಟಿ ಇನ್ಸ್ಪೆಕ್ಟರ್ (Senior Publicity Inspector) – 8 ಹುದ್ದೆಗಳು
- ಜೂನಿಯರ್ ಟ್ರಾನ್ಸ್ಲೇಟರ್ / ಹಿಂದಿ (Junior Translator / Hindi) – 79 ಹುದ್ದೆಗಳು
- ಸ್ಟಾಫ್ ಅಂಡ್ ವೆಲ್ಫೇರ್ ಇನ್ಸ್ಪೆಕ್ಟರ್ (Staff and Welfare Inspector) – 27 ಹುದ್ದೆಗಳು
- ಸೈಂಟಿಫಿಕ್ ಅಸಿಸ್ಟೆಂಟ್ – ಟ್ರೈನಿಂಗ್ (Scientific Assistant – Training) – 3 ಹುದ್ದೆಗಳು
- ಲ್ಯಾಬ್ ಅಸಿಸ್ಟೆಂಟ್ ಗ್ರೇಡ್-III (Lab Assistant Gr. III – Chemist & Metallurgist) – 36 ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ: ಭಾರತೀಯ ರೈಲ್ವೆಯ ಐಸೋಲೇಟೆಡ್ ಕೆಟಗರಿ (Isolated Categories) ವಿಭಾಗದಲ್ಲಿ ಒಟ್ಟು 191 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಲ್ಲಿ ನಮ್ಮ ಕರ್ನಾಟಕದ RRB ಬೆಂಗಳೂರು ವಲಯದಲ್ಲೂ ಹುದ್ದೆಗಳು ಖಾಲಿ ಇರುವುದರಿಂದ ಆಸಕ್ತಿ ಹಾಗೂ ಅರ್ಹತೆ ಪಡೆದ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಉದ್ಯೋಗದ ಸ್ಥಳ: ಭಾರತದಾದ್ಯಂತ (ಕರ್ನಾಟಕ – RRB ಬೆಂಗಳೂರು ಸೇರಿದಂತೆ)
RRB Isolated Category Recruitment 2026 – ಸಂಬಳದ ಮಾಹಿತಿ (Salary Details)
ವೇತನ ಶ್ರೇಣಿ: ಭಾರತೀಯ ರೈಲ್ವೆ ಇಲಾಖೆಯ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 7ನೇ ವೇತನ ಆಯೋಗದ ನಿಯಮಗಳ ಅನುಸಾರ ಹುದ್ದೆಗಳಿಗೆ ಅನುಗುಣವಾಗಿ ತಿಂಗಳಿಗೆ 19,900 – 44,900 ಆರಂಭಿಕ ಮೂಲ ವೇತನ (Initial Pay) ಹಾಗೂ ಇತರ ಭತ್ಯೆಗಳನ್ನು ನೀಡಲಾಗುತ್ತದೆ.
- ಲ್ಯಾಬ್ ಅಸಿಸ್ಟೆಂಟ್ ಗ್ರೇಡ್-III: ₹19,900/- (ಪೇ ಲೆವೆಲ್ 2)
- ಸೀನಿಯರ್ ಪಬ್ಲಿಸಿಟಿ ಇನ್ಸ್ಪೆಕ್ಟರ್, ಜೂನಿಯರ್ ಟ್ರಾನ್ಸ್ಲೇಟರ್, ಸ್ಟಾಫ್ & ವೆಲ್ಫೇರ್ ಇನ್ಸ್ಪೆಕ್ಟರ್, ಸೈಂಟಿಫಿಕ್ ಅಸಿಸ್ಟೆಂಟ್: ₹35,400/- (ಪೇ ಲೆವೆಲ್ 6)
- ಚೀಫ್ ಲಾ ಅಸಿಸ್ಟೆಂಟ್, ಪಬ್ಲಿಕ್ ಪ್ರಾಸಿಕ್ಯೂಟರ್: ₹44,900/- (ಪೇ ಲೆವೆಲ್ 7)

ಮುಖ್ಯ ಸೂಚನೆ: ನಾವು ನೀಡುವ ಪ್ರತಿಯೊಂದು ಉದ್ಯೋಗದ ಮಾಹಿತಿಯು ಉಚಿತವಾಗಿದ್ದು ನಾವು ನೀಡುವ ಮಾಹಿತಿಗೆ ಯಾವುದೇ ರೀತಿಯ ಹಣವನ್ನು ಕೇಳುವುದಿಲ್ಲ. jobsexplain.com ಈ website ಕರ್ನಾಟಕದ ಅಭ್ಯರ್ಥಿಗಳಿಗೆ ಹಾಗೂ ಉದ್ಯೋಗ ಬಯಸುವ ವಿದ್ಯಾರ್ಥಿಗಳಿಗೆ ಉಚಿತವಾದ ಉದ್ಯೋಗ ಮಾಹಿತಿ ನೀಡುವ website. ಒಂದು ವೇಳೆ ನಮ್ಮ ಹೆಸರಿನಲ್ಲಿ ಯಾರಾದರೂ ಹಣ ಪಾವತಿ ಮಾಡಲು ನಿಮಗೆ WhatsApp ಅಥವಾ Instagram ಮುಂತಾದ ಸೋಶಿಯಲ್ ಪ್ಲಾಟ್ಫಾರ್ಮ್ಗಳ ಮೂಲಕ ಹಣ ಪಾವತಿ ಮಾಡಲು ಹೇಳಿದರೆ ದಯವಿಟ್ಟು ಹಣವನ್ನು ನೀಡಬೇಡಿ. ಈ ಕುರಿತು ನಮಗೆ ತಿಳಿಸಿ ನಮ್ಮ ವಾಟ್ಸಾಪ್ ನಂಬರ್ : 8050798925 ಹೆಚ್ಚಿನ ಮಾಹಿತಿಗಾಗಿ ವಾಟ್ಸಾಪ್ ಮೂಲಕ ನಮ್ಮನ್ನು ಸಂಪರ್ಕಿಸಿ ಹಾಗೂ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮುಂಚೆ ನಾವು ಕೆಳಗಡೆ ನೀಡಿರುವ ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಸ್ಪಷ್ಟವಾಗಿ ಓದಿ ತದನಂತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.
RRB Isolated Category Recruitment 2026 – ಶೈಕ್ಷಣಿಕ ಅರ್ಹತೆಗಳು (Qualification)
ಶೈಕ್ಷಣಿಕ ವಿದ್ಯಾರ್ಹತೆ:
ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯ (RRB) ವಿವಿಧ ಹುದ್ದೆಗಳಿಗೆ ನಿಗದಿಪಡಿಸಲಾದ ಶೈಕ್ಷಣಿಕ ಅರ್ಹತೆಗಳ ವಿವರ ಕೆಳಗಿನಂತಿದೆ:
| ಹುದ್ದೆಯ ಹೆಸರು | ವಿದ್ಯಾರ್ಹತೆ ವಿವರ |
| ಚೀಫ್ ಲಾ ಅಸಿಸ್ಟೆಂಟ್ & ಪಬ್ಲಿಕ್ ಪ್ರಾಸಿಕ್ಯೂಟರ್ | ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಾನೂನು ಪದವಿ (LLB) ಹಾಗೂ ವಕೀಲರಾಗಿ ನಿಗದಿತ ಅನುಭವ. |
| ಸೀನಿಯರ್ ಪಬ್ಲಿಸಿಟಿ ಇನ್ಸ್ಪೆಕ್ಟರ್ | ಯಾವುದೇ ಪದವಿ ಜೊತೆಗೆ ಪಬ್ಲಿಕ್ ರಿಲೇಶನ್ಸ್ / ಜರ್ನಲಿಸಂ / ಮಾಸ್ ಕಮ್ಯುನಿಕೇಶನ್ನಲ್ಲಿ ಡಿಪ್ಲೊಮಾ. |
| ಸ್ಟಾಫ್ ಅಂಡ್ ವೆಲ್ಫೇರ್ ಇನ್ಸ್ಪೆಕ್ಟರ್ | ಪದವಿ ಜೊತೆಗೆ ಲೇಬರ್/ಸೋಷಿಯಲ್ ವೆಲ್ಫೇರ್ ಡಿಪ್ಲೊಮಾ, LLB ಅಥವಾ MBA/PG ಡಿಪ್ಲೊಮಾ. |
| ಜೂನಿಯರ್ ಟ್ರಾನ್ಸ್ಲೇಟರ್ & ಸೈಂಟಿಫಿಕ್ ಅಸಿಸ್ಟೆಂಟ್ | ಸಂಬಂಧಿತ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ (Master’s Degree). |
| ಲ್ಯಾಬ್ ಅಸಿಸ್ಟೆಂಟ್ ಗ್ರೇಡ್-III | 12ನೇ ತರಗತಿ (ಪಿಯುಸಿ) ವಿಜ್ಞಾನ ವಿಭಾಗದಲ್ಲಿ (ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ) ಉತ್ತೀರ್ಣ. |
RRB Isolated Category Recruitment 2026 – ವಯೋಮಿತಿ ವಿವರಣೆ (Age Limit)
ವಯೋಮಿತಿ: ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷ ಹಾಗೂ ಗರಿಷ್ಠ ವಯೋಮಿತಿ ಹುದ್ದೆಗಳಿಗೆ ಅನುಗುಣವಾಗಿ 30, 32, 33, 35 ಮತ್ತು 40 ವರ್ಷ (01-01-2027 ಕ್ಕೆ ಅನ್ವಯವಾಗುವಂತೆ) ನಿಗದಿಪಡಿಸಲಾಗಿರುತ್ತದೆ. ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲಾಖೆಯ ಅಧಿಕೃತ ಅಧಿಸೂಚನೆ ಗಮನಿಸಿ.
Also Read 📢 : EIL Recruitment 2026: 87 Associate Engineer ಹುದ್ದೆಗಳ ನೇಮಕಾತಿ! ₹80,000 ವರೆಗೆ ಸಂಬಳ
ವಯೋಮಿತಿ ಸಡಿಲಿಕೆ ವಿವರಣೆ: ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯ (RRB) ನಿಯಮಗಳ ಅನ್ವಯ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ (OBC ಅಭ್ಯರ್ಥಿಗಳಿಗೆ 3 ವರ್ಷ, SC/ST ಅಭ್ಯರ್ಥಿಗಳಿಗೆ 5 ವರ್ಷ ಹಾಗೂ PwBD ಅಭ್ಯರ್ಥಿಗಳಿಗೆ 10 ರಿಂದ 15 ವರ್ಷಗಳವರೆಗೆ ಸಡಿಲಿಕೆ ಇರುತ್ತದೆ). ಈ ಕುರಿತು ಹೆಚ್ಚಿನ ಮಾಹಿತಿ ಬೇಕಾದಲ್ಲಿ ನಾವು ನೀಡಿರುವ ಅಧಿಸೂಚನೆಯನ್ನು ಗಮನಿಸಿ.
RRB Isolated Category Recruitment 2026 – ಅರ್ಜಿ ಶುಲ್ಕ (Application Fee)
ಅರ್ಜಿ ಶುಲ್ಕ:
ಅಭ್ಯರ್ಥಿಗಳ ವರ್ಗಕ್ಕೆ ಅನುಗುಣವಾಗಿ ನಿಗದಿಪಡಿಸಲಾದ ಅರ್ಜಿ ಶುಲ್ಕದ ವಿವರಗಳು ಹೀಗಿವೆ:
| ವರ್ಗದ ಅಭ್ಯರ್ಥಿಗಳು | ಅರ್ಜಿ ಶುಲ್ಕ | ಶುಲ್ಕ ಮರುಪಾವತಿ ವಿವರ |
| ಸಾಮಾನ್ಯ / OBC / EWS ಅಭ್ಯರ್ಥಿಗಳು | ₹500/- | CBT ಪರೀಕ್ಷೆಗೆ ಹಾಜರಾದ ನಂತರ ₹400/- ಮರುಪಾವತಿ ಮಾಡಲಾಗುತ್ತದೆ. |
| SC / ST / PwBD / ಮಹಿಳಾ / ಮಾಜಿ ಸೈನಿಕರು / EBC | ₹250/- | CBT ಪರೀಕ್ಷೆಗೆ ಹಾಜರಾದ ನಂತರ ಪೂರ್ಣ ₹250/- ಮರುಪಾವತಿ ಮಾಡಲಾಗುತ್ತದೆ. |
RRB Isolated Category Recruitment 2026 – ಆಯ್ಕೆ ವಿಧಾನ (Selection Process)
ಆಯ್ಕೆ ವಿಧಾನ: ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯ ನಿಯಮಗಳ ಅನುಸಾರ ಹುದ್ದೆಗಳಿಗೆ ಅನುಗುಣವಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆ (Single Stage CBT), ಅನುವಾದ ಪರೀಕ್ಷೆ (Translation Test – ಅನ್ವಯವಾಗುವ ಹುದ್ದೆಗಳಿಗೆ ಮಾತ್ರ), ದಾಖಲೆಗಳ ಪರಿಶೀಲನೆ (Document Verification) ಮತ್ತು ವೈದ್ಯಕೀಯ ಪರೀಕ್ಷೆಯ (Medical Examination) ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. (ಸೂಚನೆ: ಪರೀಕ್ಷೆಯನ್ನು ಕನ್ನಡ ಭಾಷೆಯಲ್ಲೂ ಬರೆಯಲು ಅವಕಾಶವಿರುತ್ತದೆ).
RRB Isolated Category Recruitment 2026 – online ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? (How to Apply)
ಅರ್ಜಿ ಸಲ್ಲಿಸುವ ವಿಧಾನ: ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು online ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿ ಸಲ್ಲಿಸುವ ಮೊದಲು ಕೆಳಗಡೆ ನೀಡಿರುವ ಕೆಲವಷ್ಟು ಮಾಹಿತಿಗಳನ್ನು ಸರಿಯಾಗಿ ಗಮನಿಸಿ.
ಮೊದಲನೇ ಹಂತ: ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದಯವಿಟ್ಟು ಇಲಾಖೆಯ ಅಧಿಕೃತ ವೆಬ್ಸೈಟ್ (https://www.rrbapply.gov.in) ಗೆ ಭೇಟಿ ನೀಡಿ ಅಲ್ಲಿ ಹುದ್ದೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸರಿಯಾಗಿ ಗಮನಿಸಿ.
ಎರಡನೇ ಹಂತ: ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ತಿಳಿದುಕೊಂಡು ಬಳಿಕ ಅಭ್ಯರ್ಥಿಗಳು ನೀವು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದೀರಾ ಎಂಬುದನ್ನ ಖಚಿತ ಪಡಿಸಿಕೊಂಡು ಹೊಸ ಖಾತೆಯನ್ನು (Create an Account) ರಚಿಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾಗಿ.
ಮೂರನೇ ಹಂತ: ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಸಂಬಂಧಿಸಿದ ಶೈಕ್ಷಣಿಕ ಮಾಹಿತಿಗಳ ಅಂಕಪಟ್ಟಿಗಳನ್ನು ನೀವು ಹೊಂದಿದ್ದೀರಾ ಎಂಬುದನ್ನು ಗಮನಿಸಿಕೊಳ್ಳಿ ಏಕೆಂದರೆ ಏನಾದರೂ ತಪ್ಪುಗಳಾದರೆ ಬದಲಾಯಿಸುವುದು ಕಷ್ಟವಾಗುತ್ತದೆ.
ನಾಲ್ಕನೇ ಹಂತ: ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಲ್ಲಿ ಕಾಣುವ ಪರದೆಯ ಮೇಲೆ ನಿಮ್ಮ ಹೆಸರು, ನಿಮ್ಮ ಮೊಬೈಲ್ ನಂಬರ್, ನಿಮ್ಮ ವಿಳಾಸ, ಇಮೇಲ್ ಐಡಿ, ಲೈವ್ ಫೋಟೋ (Live Photo) ಹಾಗೂ ಸಹಿಯನ್ನು ಸರಿಯಾಗಿ ನಮೂದಿಸಿ/ಅಪ್ಲೋಡ್ ಮಾಡಿ ಏಕೆಂದರೆ ಸಂವಹನ ಉದ್ದೇಶದಿಂದ ಇವುಗಳು ಉಪಯೋಗಕಾರಿಯಾಗಿರುತ್ತವೆ.
ಐದನೇ ಹಂತ: ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಬಳಿಕ ನೀವು ನೀಡಿದ ಮಾಹಿತಿಯು ಸರಿಯಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿಕೊಳ್ಳಿ ಉದಾಹರಣೆಗೆ ನಿಮ್ಮ ಹೆಸರು, ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ವಿಳಾಸ ಇವುಗಳು ಸರಿಯಾಗಿದ್ದರೆ ಅರ್ಜಿ ಶುಲ್ಕವನ್ನು ಪಾವತಿಸಿ ಅರ್ಜಿ ಸಲ್ಲಿಸಿ ಎಂಬುವುದರ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನ ಸಂಪೂರ್ಣವಾಗಿ ಸಲ್ಲಿಸಿ, ಬಳಿಕ ಕಂಪ್ಯೂಟರ್ ಪರದೆಯ ಮೇಲೆ ಕಾಣುವ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಬಳಿ ಇಟ್ಟುಕೊಳ್ಳಿ.
RRB Isolated Category Recruitment 2026 – ಪ್ರಮುಖ ದಿನಾಂಕಗಳು (important dates)
ಪ್ರಮುಖ ದಿನಾಂಕಗಳು:
ಈ ನೇಮಕಾತಿಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳ ವಿವರ ಕೆಳಗಿನಂತಿದೆ:
| ವಿವರಗಳು | ದಿನಾಂಕಗಳು |
| ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ | 05-11-2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 04-12-2026 (ರಾತ್ರಿ 11:59 ರವರೆಗೆ) |
| ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ | 06-12-2026 |
| ಅರ್ಜಿ ತಿದ್ದುಪಡಿ ಕಾಲಾವಕಾಶ (Modification Window) | 07-12-2026 ರಿಂದ 16-12-2026 ರವರೆಗೆ |
(ಒಂದು ವೇಳೆ ಭಾರತೀಯ ರೈಲ್ವೆ ಇಲಾಖೆಯ ನೋಟಿಫಿಕೇಶನ್ ಲಿಂಕ್ ಡೌನ್ಲೋಡ್ ಆಗದಿದ್ದರೆ ನಮ್ಮ ವಾಟ್ಸಪ್ ನಂಬರ್ 8050798925 ಈ ನಂಬರಿಗೆ ಮೆಸೇಜ್ ಮಾಡಿ)
RRB Isolated Category Recruitment 2026 – ಪ್ರಮುಖ ಲಿಂಕ್ ಗಳು (Important Links)
| Apply Link | Click |
| Notification Link | Click |
| Telegram Join Link | Click |
| WhatsApp channel | Click |
| App Link | Click |
ಮುಖ್ಯವಾದ ಮಾಹಿತಿ: ಪ್ರಿಯ ಸ್ನೇಹಿತರೆ, ನಾವು ನೀಡಿರುವ ಈ ಭಾರತೀಯ ರೈಲ್ವೆ ಇಲಾಖೆಯ ಈ ಉದ್ಯೋಗದ ಮಾಹಿತಿ ಇಷ್ಟವಾಗಿದ್ದರೆ ದಯವಿಟ್ಟು ಮಾಹಿತಿ ಓದಿ ಸುಮ್ಮನಾಗಬೇಡಿ ಆದಷ್ಟು ಈ ಮಾಹಿತಿಯನ್ನ ಇತರರೊಂದಿಗೆ ಹಂಚಿಕೊಳ್ಳಿ ಇದು ಇನ್ನೊಬ್ಬರ ಭವಿಷ್ಯವನ್ನು ರೂಪಿಸುವ ಮಾಹಿತಿಯಾಗುತ್ತದೆ. ಹಾಗೆ ಈ ಮಾಹಿತಿ ಇಷ್ಟವಾಗಿದ್ದರೆ ನಿಮ್ಮ Facebook group ಮತ್ತು WhatsApp group ಹಾಗೂ telegram ಮೂಲಕ ಹಂಚಿಕೊಳ್ಳಿ.

Hello friends, my name is Basavaraj. I am the writer and founder of this blog. I share all the information related to Central government jobs, State government jobs, and government schemes through this website.