10ನೇ ಪಾಸ್ ಅಭ್ಯರ್ಥಿಗಳಿಗೂ ಉದ್ಯೋಗಾವಕಾಶ! ಆರೋಗ್ಯ ಇಲಾಖೆಯ 59 ಹುದ್ದೆಗಳ ನೇಮಕಾತಿ | DHFWS Haveri Recruitment 2026
ಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ 2026 ಇಲಾಖೆಯಲ್ಲಿ ಖಾಲಿ ಇರುವ 59 medical officer, lab technician ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಈ ಹುದ್ದೆಗಳಿಗೆ 10ನೇ ತರಗತಿ, ಡಿಪ್ಲೋಮೋ, ಬಿ ಎಸ್ ಸಿ ಹಾಗೂ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆ ಇರುವುದಿಲ್ಲ ಸಂದರ್ಶನದ ಆಧಾರದ ಮೇಲೆ ನೇಮಕಾತಿ ಇರುತ್ತದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹುದ್ದೆಗಳಿಗೆ ಸಂಬಂಧಿಸಿದ ಇನ್ನಷ್ಟು ಹೆಚ್ಚಿನ ಮಾಹಿತಿಯಾದ ಆಯ್ಕೆ ವಿಧಾನ, ಅರ್ಜಿ ಹೇಗೆ ಸಲ್ಲಿಸುವುದು ಹಾಗೂ ದಾಖಲಾತಿಗಳ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
DHFWS Haveri Recruitment 2026 – ಪ್ರಮುಖ ವಿವರಣೆ (Overview)
ನೇಮಕಾತಿ ಇಲಾಖೆ ಹೆಸರು:
ಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ (DHFWS Haveri Recruitment 2026)
ಹುದ್ದೆಗಳ ಹೆಸರು:
- ವೈದ್ಯಾಧಿಕಾರಿಗಳು (NP-NCDs ವಿಭಾಗ)
- ವೈದ್ಯಾಧಿಕಾರಿಗಳು (ಐ.ಸಿ.ಯು / ಹೆಚ್.ಡಿ.ಯು)
- ವೈದ್ಯಾಧಿಕಾರಿಗಳು (PM-ABHIM – ನಮ್ಮ ಕ್ಲಿನಿಕ್)
- ಪ್ರಯೋಗ ಶಾಲಾ ತಂತ್ರಜ್ಞರು (ತಾಯಿ ಆರೋಗ್ಯ, ರಕ್ತ ಶೇಖರಣಾ ಘಟಕ, ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ, PM-ABHIM ನಮ್ಮ ಕ್ಲಿನಿಕ್)
- ಶುಶ್ರೂಷಕರು (Nursing Officers – MHU2)
- ಮಹಿಳಾ ಶುಶ್ರೂಷಾಧಿಕಾರಿಗಳು (Nursing Officers – MH ವಿಭಾಗ)
- ಮಹಿಳಾ ಶುಶ್ರೂಷಾಧಿಕಾರಿಗಳು (Nursing Officers – CH ವಿಭಾಗ)
- ಮಹಿಳಾ ಶುಶ್ರೂಷಾಧಿಕಾರಿಗಳು (Nursing Officers – ICU/HDU)
- ಶುಶ್ರೂಷಾಧಿಕಾರಿಗಳು (Nursing Officers – PM-ABHIM)
- ಶುಶ್ರೂಷಾಧಿಕಾರಿಗಳು (Nursing Officers – NP-NCDs ವಿಭಾಗ)
- ಸೈಕಿಯಾಟ್ರಿಕ್ ನರ್ಸ್ (Psychiatric Nurse)
- ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು (PHCO – ನಮ್ಮ ಕ್ಲಿನಿಕ್ ಮತ್ತು ತಾಯಿ ಆರೋಗ್ಯ)
- ಸೈಕಾಲಜಿಸ್ಟ್ (Psychologist)
- ಆಡಿಯೋಲೊಜಿಸ್ಟ್ / ಸ್ಪೀಚ್ ಥೆರಪಿಸ್ಟ್ (Audiologist / Speech Therapist)
- ಆಪ್ಟೋಮೆಟ್ರಿಸ್ಟ್ (Optometrist)
- ಕ್ಷ-ಕಿರಣ ತಂತ್ರಜ್ಞರು (X-Ray Technician)
- ಫಿಜಿಯೋಥೆರಪಿಸ್ಟ್ (Physiotherapist)
ಒಟ್ಟು ಹುದ್ದೆಗಳ ಸಂಖ್ಯೆ:
ಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಒಟ್ಟು 59 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳು ನಮ್ಮ ಕರ್ನಾಟಕದಲ್ಲಿ ಖಾಲಿ ಇರುವುದರಿಂದ ಆಸಕ್ತಿ ಹಾಗೂ ಅರ್ಹತೆ ಪಡೆದ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಉದ್ಯೋಗದ ಸ್ಥಳ: [ ಹಾವೇರಿ ]
Also Read 📢 : ವಿಜಯಪುರದ ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ! ಜಿಲ್ಲಾ ನ್ಯಾಯಾಲಯದಲ್ಲಿ 30 ಹುದ್ದೆಗಳ ನೇಮಕಾತಿ
DHFWS Haveri Recruitment 2026 – ಸಂಬಳದ ಮಾಹಿತಿ (Salary Details)
ವೇತನ ಶ್ರೇಣಿ:
ಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ಇಲಾಖೆಯ ನಿಯಮಗಳ ಅನುಸಾರ ವೇತನ ನೀಡಲಾಗುತ್ತದೆ.
ಮುಖ್ಯ ಸೂಚನೆ:
ನಾವು ನೀಡುವ ಪ್ರತಿಯೊಂದು ಉದ್ಯೋಗದ ಮಾಹಿತಿಯು ಉಚಿತವಾಗಿದ್ದು ನಾವು ನೀಡುವ ಮಾಹಿತಿಗೆ ಯಾವುದೇ ರೀತಿಯ ಹಣವನ್ನು ಕೇಳುವುದಿಲ್ಲ. jobsexplain.com ಈ website ಕರ್ನಾಟಕದ ಅಭ್ಯರ್ಥಿಗಳಿಗೆ ಹಾಗೂ ಉದ್ಯೋಗ ಬಯಸುವ ವಿದ್ಯಾರ್ಥಿಗಳಿಗೆ ಉಚಿತವಾದ ಉದ್ಯೋಗ ಮಾಹಿತಿ ನೀಡುವ website. ಒಂದು ವೇಳೆ ನಮ್ಮ ಹೆಸರಿನಲ್ಲಿ ಯಾರಾದರೂ ಹಣ ಪಾವತಿ ಮಾಡಲು ನಿಮಗೆ WhatsApp ಅಥವಾ Instagram ಮುಂತಾದ ಸೋಶಿಯಲ್ ಪ್ಲಾಟ್ಫಾರ್ಮ್ಗಳ ಮೂಲಕ ಹಣ ಪಾವತಿ ಮಾಡಲು ಹೇಳಿದರೆ ದಯವಿಟ್ಟು ಹಣವನ್ನು ನೀಡಬೇಡಿ. ಈ ಕುರಿತು ನಮಗೆ ತಿಳಿಸಿ ನಮ್ಮ ವಾಟ್ಸಾಪ್ ನಂಬರ್ : 8050798925 ಹೆಚ್ಚಿನ ಮಾಹಿತಿಗಾಗಿ ವಾಟ್ಸಾಪ್ ಮೂಲಕ ನಮ್ಮನ್ನು ಸಂಪರ್ಕಿಸಿ ಹಾಗೂ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮುಂಚೆ ನಾವು ಕೆಳಗಡೆ ನೀಡಿರುವ ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಸ್ಪಷ್ಟವಾಗಿ ಓದಿ ತದನಂತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.
DHFWS Haveri Recruitment 2026 – ಶೈಕ್ಷಣಿಕ ಅರ್ಹತೆಗಳು (Qualification)
ಶೈಕ್ಷಣಿಕ ವಿದ್ಯಾರ್ಹತೆ:
ಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ ಹುದ್ದೆಗಳಿಗೆ ಅನುಗುಣವಾಗಿ 10th, PUC, degree, BSc, diploma, MBBS, BPT ಶೈಕ್ಷಣಿಕ ಅರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು.
| ಹುದ್ದೆಯ ಹೆಸರು | ನಿಗದಿಪಡಿಸಿದ ಶೈಕ್ಷಣಿಕ ಅರ್ಹತೆ |
| ವೈದ್ಯಾಧಿಕಾರಿಗಳು (NP-NCDs ವಿಭಾಗ) | • MBBS ಉತ್ತೀರ್ಣರಾಗಿರಬೇಕು, ಕಡ್ಡಾಯವಾಗಿ ಇಂಟರ್ನ್ಶಿಪ್ ಪೂರೈಸಿರಬೇಕು ಹಾಗೂ ಕೆ.ಎಂ.ಸಿ (KMC) ನೋಂದಣಿ ಹೊಂದಿರಬೇಕು.
• ಕಾನ್ವೊಕೇಷನ್ / ಪದವಿ ಪ್ರಮಾಣಪತ್ರ ಕಡ್ಡಾಯ.
• ಆಸ್ಪತ್ರೆಯಲ್ಲಿ ಕನಿಷ್ಠ 03 ವರ್ಷ ಕೆಲಸ ಮಾಡಿದ ಅನುಭವ (ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಡಿ ಕೆಲಸ ಮಾಡಿದ ಅನುಭವಕ್ಕೆ ಆದ್ಯತೆ). |
| ವೈದ್ಯಾಧಿಕಾರಿಗಳು (ಐ.ಸಿ.ಯು / ಹೆಚ್.ಡಿ.ಯು) | • MBBS ಉತ್ತೀರ್ಣರಾಗಿರಬೇಕು, ಕಡ್ಡಾಯವಾಗಿ ಇಂಟರ್ನ್ಶಿಪ್ ಪೂರೈಸಿರಬೇಕು ಹಾಗೂ ಕೆ.ಎಂ.ಸಿ ನೋಂದಣಿ ಹೊಂದಿರಬೇಕು.
• ಕಾನ್ವೊಕೇಷನ್ / ಪದವಿ ಪ್ರಮಾಣಪತ್ರ ಕಡ್ಡಾಯವಾಗಿ ಹೊಂದಿರಬೇಕು. |
| ವೈದ್ಯಾಧಿಕಾರಿಗಳು (PM-ABHIM – ನಮ್ಮ ಕ್ಲಿನಿಕ್) | • MBBS ಉತ್ತೀರ್ಣರಾಗಿರಬೇಕು, ಕಡ್ಡಾಯವಾಗಿ ಇಂಟರ್ನ್ಶಿಪ್ ಪೂರೈಸಿರಬೇಕು ಹಾಗೂ ಕೆ.ಎಂ.ಸಿ ನೋಂದಣಿ ಹೊಂದಿರಬೇಕು.
• ಕಾನ್ವೊಕೇಷನ್ / ಪದವಿ ಪ್ರಮಾಣಪತ್ರ ಕಡ್ಡಾಯವಾಗಿ ಹೊಂದಿರಬೇಕು. |
| ಪ್ರಯೋಗ ಶಾಲಾ ತಂತ್ರಜ್ಞರು (Lab Technicians)
(ತಾಯಿ ಆರೋಗ್ಯ, ರಕ್ತ ಶೇಖರಣಾ ಘಟಕ, ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ, PM-ABHIM ನಮ್ಮ ಕ್ಲಿನಿಕ್) |
• SSLC ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಮತ್ತು ಕರ್ನಾಟಕ ರಾಜ್ಯ ಅರೆ ವೈದ್ಯಕೀಯ ಮಂಡಳಿಯು ನಡೆಸುವ ಪ್ರಯೋಗಶಾಲಾ ತಂತ್ರಜ್ಞತೆಯಲ್ಲಿ 3 ವರ್ಷಗಳ ಡಿಪ್ಲೊಮಾ;
ಅಥವಾ
• ದ್ವಿತೀಯ PUC (Science) ಉತ್ತೀರ್ಣ ಮತ್ತು ಕರ್ನಾಟಕ ರಾಜ್ಯ ಅರೆ ವೈದ್ಯಕೀಯ ಮಂಡಳಿಯು ನಡೆಸುವ ಪ್ರಯೋಗ ಶಾಲಾ ತಂತ್ರಜ್ಞತೆಯಲ್ಲಿ 2 ವರ್ಷಗಳ ಡಿಪ್ಲೊಮಾ.
(ಕರ್ನಾಟಕ ರಾಜ್ಯ ಅರೆ ವೈದ್ಯಕೀಯ ಮಂಡಳಿಯ ನೋಂದಣಿ ಕಡ್ಡಾಯ). |
| ಶುಶ್ರೂಷಕರು (Nursing Officers – MHU2) | • GNM Nursing / B.Sc Nursing ಪೂರ್ಣಗೊಳಿಸಿರಬೇಕು.
• ಕರ್ನಾಟಕ ನರ್ಸಿಂಗ್ ಕೌನ್ಸಿಲ್ನಲ್ಲಿ ನೋಂದಣಿಯಾಗಿರಬೇಕು.
• ಕನಿಷ್ಠ 02 ವರ್ಷಗಳ ಸೇವಾ ಅನುಭವ ಹೊಂದಿರಬೇಕು. |
| ಮಹಿಳಾ ಶುಶ್ರೂಷಾಧಿಕಾರಿಗಳು (Nursing Officers – MH ವಿಭಾಗ) | • ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಜನರಲ್ ನರ್ಸಿಂಗ್ ಡಿಪ್ಲೊಮಾ (GNM) ಪಡೆದಿರಬೇಕು.
• ಕರ್ನಾಟಕ ನರ್ಸಿಂಗ್ ಕೌನ್ಸಿಲ್ನಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರಬೇಕು. |
| ಮಹಿಳಾ ಶುಶ್ರೂಷಾಧಿಕಾರಿಗಳು (Nursing Officers – CH ವಿಭಾಗ) | • ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಜನರಲ್ ನರ್ಸಿಂಗ್ ಡಿಪ್ಲೊಮಾ (GNM) ಪಡೆದಿರಬೇಕು.
• ಕರ್ನಾಟಕ ನರ್ಸಿಂಗ್ ಕೌನ್ಸಿಲ್ನಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರಬೇಕು. |
| ಮಹಿಳಾ ಶುಶ್ರೂಷಾಧಿಕಾರಿಗಳು (Nursing Officers – ICU/HDU) | • ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಜನರಲ್ ನರ್ಸಿಂಗ್ ಡಿಪ್ಲೊಮಾ (GNM) ಪಡೆದಿರಬೇಕು.
• ಕರ್ನಾಟಕ ನರ್ಸಿಂಗ್ ಕೌನ್ಸಿಲ್ನಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರಬೇಕು. |
| ಶುಶ್ರೂಷಾಧಿಕಾರಿಗಳು (Nursing Officers – PM-ABHIM) | • B.Sc Nursing ಅಥವಾ Diploma in Nursing (GNM) ಹೊಂದಿರಬೇಕು.
• ಕರ್ನಾಟಕ ನರ್ಸಿಂಗ್ ಕೌನ್ಸಿಲ್ನಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರಬೇಕು. |
| ಶುಶ್ರೂಷಾಧಿಕಾರಿಗಳು (Nursing Officers – NP-NCDs ವಿಭಾಗ) | • ಜನರಲ್ ನರ್ಸಿಂಗ್ ಡಿಪ್ಲೊಮಾ (GNM) ಹೊಂದಿರಬೇಕು.
• ಕರ್ನಾಟಕ ನರ್ಸಿಂಗ್ ಕೌನ್ಸಿಲ್ನಲ್ಲಿ ನೋಂದಣಿ ಕಡ್ಡಾಯ.
• ಆಸ್ಪತ್ರೆಯಲ್ಲಿ ಕನಿಷ್ಠ 2 ವರ್ಷಗಳ ಸೇವಾ ಅನುಭವ ಹೊಂದಿರಬೇಕು. |
| ಸೈಕಿಯಾಟ್ರಿಕ್ ನರ್ಸ್ (Psychiatric Nurse) | • ಭಾರತೀಯ ನರ್ಸಿಂಗ್ ಕೌನ್ಸಿಲ್ ಮಾನ್ಯತೆ ಪಡೆದ ಸಂಸ್ಥೆಯಿಂದ B.Sc Nursing ಅಥವಾ ತತ್ಸಮಾನ ಪದವಿ (ಲಭ್ಯವಿಲ್ಲದಿದ್ದಲ್ಲಿ ಜನರಲ್ ನರ್ಸಿಂಗ್ ಪರಿಗಣಿಸಲಾಗುವುದು).
• ಸೈಕಿಯಾಟ್ರಿ / ಮಾನಸಿಕ ಆರೋಗ್ಯ ಸಂಸ್ಥೆ/ಆಸ್ಪತ್ರೆಯಲ್ಲಿ ಕನಿಷ್ಠ 2 ವರ್ಷ ಕೆಲಸ ಮಾಡಿದ ಅನುಭವ.
(ಅಪೇಕ್ಷಣೀಯ: ಸೈಕಿಯಾಟ್ರಿಕ್ ನರ್ಸಿಂಗ್ನಲ್ಲಿ PG ಡಿಪ್ಲೊಮಾ). |
| ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು (PHCO)
(ನಮ್ಮ ಕ್ಲಿನಿಕ್ ಮತ್ತು ತಾಯಿ ಆರೋಗ್ಯ) |
• ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದ ANM ಶಾಲೆಗಳಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳ ತರಬೇತಿ ಪಡೆದಿರಬೇಕು.
• ಕರ್ನಾಟಕ ನರ್ಸಿಂಗ್ ಕೌನ್ಸಿಲ್ನಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರಬೇಕು. |
| ಸೈಕಾಲಜಿಸ್ಟ್ (Psychologist) | • RCI (ಭಾರತೀಯ ಪುನರ್ವಸತಿ ಮಂಡಳಿ) ಮಾನ್ಯತೆ ಪಡೆದ ಸಂಸ್ಥೆಯಿಂದ Master’s Degree in Child Psychology.
(ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷ ಕೆಲಸ ಮಾಡಿದ ಅನುಭವಕ್ಕೆ ಆದ್ಯತೆ). |
| ಆಡಿಯೋಲೊಜಿಸ್ಟ್ / ಸ್ಪೀಚ್ ಥೆರಪಿಸ್ಟ್ (Audiologist / Speech Therapist) | • RCI ಮಾನ್ಯತೆ ಪಡೆದ ಸಂಸ್ಥೆಯಿಂದ Bachelor’s Degree in Speech and Language Pathology (BASLP).
(ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷ ಕೆಲಸ ಮಾಡಿದ ಅನುಭವಕ್ಕೆ ಆದ್ಯತೆ). |
| ಆಪ್ಟೋಮೆಟ್ರಿಸ್ಟ್ (Optometrist) | • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ Bachelor in Optometry ಅಥವಾ Master in Optometry.
(ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷ ಕೆಲಸ ಮಾಡಿದ ಅನುಭವಕ್ಕೆ ಆದ್ಯತೆ). |
| ಕ್ಷ–ಕಿರಣ ತಂತ್ರಜ್ಞರು (X-Ray Technician) | • SSLC ಉತ್ತೀರ್ಣ ಜೊತೆಗೆ RGUHS ಅಥವಾ ಕರ್ನಾಟಕ ಅರೆವೈದ್ಯಕೀಯ ಮಂಡಳಿಯ ಮಾನ್ಯತೆ ಪಡೆದ ಸಂಸ್ಥೆಯಿಂದ Diploma in X-ray / Medical Imaging Technology;
ಅಥವಾ
• 10+2 (PUC Science – PCB) ಉತ್ತೀರ್ಣ ಜೊತೆಗೆ Diploma in X-ray / Medical Imaging Technology. |
| ಫಿಜಿಯೋಥೆರಪಿಸ್ಟ್ (Physiotherapist) | • ಫಿಜಿಯೋಥೆರಪಿಯಲ್ಲಿ ಪದವಿ (B.P.T).
• ಆಸ್ಪತ್ರೆಯಲ್ಲಿ 02 ವರ್ಷಗಳ ಅನುಭವ (ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕೆಲಸ ಮಾಡಿದ ಅನುಭವಕ್ಕೆ ಆದ್ಯತೆ). |
DHFWS Haveri Recruitment 2026 – ವಯೋಮಿತಿ ವಿವರಣೆ (Age Limit)
ವಯೋಮಿತಿ:
ಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ಗರಿಷ್ಠ ವಯೋಮಿತಿ 40 ವರ್ಷ ನಿಗದಿಪಡಿಸಲಾಗಿರುತ್ತದೆ. ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲಾಖೆಯ ಅಧಿಕೃತ ಅಧಿಸೂಚನೆ ಗಮನಿಸಿ.
ವಯೋಮಿತಿ ಸಡಿಲಿಕೆ ವಿವರಣೆ:
ಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಚಾಮರಾಜನಗರ ಇಲಾಖೆಯ ನಿಯಮಗಳ ಅನ್ವಯ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ಬೇಕಾದಲ್ಲಿ ನಾವು ನೀಡಿರುವ ಅಧಿಸೂಚನೆಯನ್ನು ಗಮನಿಸಿ.
DHFWS Haveri Recruitment 2026 – ಅರ್ಜಿ ಶುಲ್ಕ (Application Fee)
ಅರ್ಜಿ ಶುಲ್ಕ:
• ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: 00/-
• 2A/2B/3A/3B ವರ್ಗದ ಅಭ್ಯರ್ಥಿಗಳಿಗೆ: 00/-
• ಪರಿಶಿಷ್ಟ ಜಾತಿ ಹಾಗೂ ಪಂಗಡ ಅಭ್ಯರ್ಥಿಗಳಿಗೆ: 00/-
• ಅಂಗವಿಕಲ ಅಭ್ಯರ್ಥಿಗಳಿಗೆ: 00/
DHFWS Haveri Recruitment 2026 – ಆಯ್ಕೆ ವಿಧಾನ (Selection Process)
ಆಯ್ಕೆ ವಿಧಾನ:
ಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯ ನಿಯಮಗಳ ಅನುಸಾರ ಹುದ್ದೆಗಳಿಗೆ ಅನುಗುಣವಾಗಿ ಮೆರಿಟ್ ಲಿಸ್ಟ್ ಹಾಗೂ ದಾಖಲಾತಿ ಪರಿಶೀಲನೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
DHFWS Haveri Recruitment 2026 – offline ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? (How to Apply)
ಅರ್ಜಿ ಸಲ್ಲಿಸುವ ವಿಧಾನ:
ಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು offline ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮೊದಲು ಕೆಳಗಡೆ ನೀಡಿರುವ ಕೆಲವಷ್ಟು ಮಾಹಿತಿಗಳನ್ನು ಸರಿಯಾಗಿ ಗಮನಿಸಿ.
ಅರ್ಜಿ ಪಡೆಯುವ ಮತ್ತು ಸಲ್ಲಿಸುವ ಆಫ್ಲೈನ್ ವಿಳಾಸಗಳ ವಿವರಗಳು:
- ವೈದ್ಯಾಧಿಕಾರಿಗಳು (ಐ.ಸಿ.ಯು/ಹೆಚ್.ಡಿ.ಯು ಮತ್ತು PM-ABHIM ನಮ್ಮ ಕ್ಲಿನಿಕ್), ಪ್ರಯೋಗ ಶಾಲಾ ತಂತ್ರಜ್ಞರು, ಮಹಿಳಾ ಶುಶ್ರೂಷಾಧಿಕಾರಿಗಳು (MH, CH, ICU/HDU, PM-ABHIM), ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು (PHCO), ಸೈಕಾಲಜಿಸ್ಟ್, ಆಡಿಯೋಲೊಜಿಸ್ಟ್/ಸ್ಪೀಚ್ ಥೆರಪಿಸ್ಟ್ ಹಾಗೂ ಆಪ್ಟೋಮೆಟ್ರಿಸ್ಟ್ ಹುದ್ದೆಗಳಿಗೆ:
ಜಿಲ್ಲಾ ಯೋಜನಾ ನಿರ್ವಹಣಾ ಘಟಕ, ಬಿ-ಬ್ಲಾಕ್, ಜಿಲ್ಲಾ ಆ.ಕು.ಕ ಅಧಿಕಾರಿಗಳ ಕಛೇರಿ ಆವರಣ, ಜಿಲ್ಲಾ ಆಡಳಿತ ಭವನ, ದೇವಗಿರಿ, ಹಾವೇರಿ.
- ವೈದ್ಯಾಧಿಕಾರಿಗಳು (NP-NCDs ವಿಭಾಗ), ಶುಶ್ರೂಷಾಧಿಕಾರಿಗಳು (NP-NCDs ವಿಭಾಗ) ಮತ್ತು ಫಿಜಿಯೋಥೆರಪಿಸ್ಟ್ ಹುದ್ದೆಗಳಿಗೆ:
ಜಿಲ್ಲಾ ಸರ್ವೆಕ್ಷಣಾ ಘಟಕ, ಎ-ಬ್ಲಾಕ್, 3ನೇ ಮಹಡಿ, ಕೊಠಡಿ ಸಂಖ್ಯೆ 15, ಜಿಲ್ಲಾ ಆಡಳಿತ ಭವನ, ದೇವಗಿರಿ, ಹಾವೇರಿ.
- ಶುಶ್ರೂಷಕರು (Nursing Officers – MHU) ಹಾಗೂ ಕ್ಷ-ಕಿರಣ ತಂತ್ರಜ್ಞರು (X-Ray Technicians) ಹುದ್ದೆಗಳಿಗೆ:
ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಅಧಿಕಾರಿಗಳ ಕಛೇರಿ, ಜಿಲ್ಲಾ ಆಸ್ಪತ್ರೆ ಆವರಣ, ಹಾವೇರಿ.
- ಸೈಕಿಯಾಟ್ರಿಕ್ ನರ್ಸ್ (Psychiatric Nurse) ಹುದ್ದೆಗೆ:
ಜಿಲ್ಲಾ ಕುಷ್ಠ ರೋಗ ನಿಯಂತ್ರಣಾ ಅಧಿಕಾರಿಗಳ ಕಛೇರಿ, ಬಿ-ಬ್ಲಾಕ್, ಜಿಲ್ಲಾ ಆಡಳಿತ ಭವನ, ದೇವಗಿರಿ, ಹಾವೇರಿ
ಮೊದಲನೇ ಹಂತ: ಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದಯವಿಟ್ಟು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಹುದ್ದೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸರಿಯಾಗಿ ಗಮನಿಸಿ.
ಎರಡನೇ ಹಂತ: ಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ತಿಳಿದುಕೊಂಡು ಬಳಿಕ ಅಭ್ಯರ್ಥಿಗಳು ನೀವು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದೀರಾ ಎಂಬುದನ್ನ ಖಚಿತ ಪಡಿಸಿಕೊಂಡು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾಗಿ.
ಮೂರನೇ ಹಂತ: ಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಸಂಬಂಧಿಸಿದ ಶೈಕ್ಷಣಿಕ ಮಾಹಿತಿಗಳ ಅಂಕಪಟ್ಟಿಗಳನ್ನು ನೀವು ಹೊಂದಿದ್ದೀರಾ ಎಂಬುದನ್ನು ಗಮನಿಸಿಕೊಳ್ಳಿ ಏಕೆಂದರೆ ಏನಾದರೂ ತಪ್ಪುಗಳಾದರೆ ಬದಲಾಯಿಸುವುದು ಕಷ್ಟವಾಗುತ್ತದೆ.
DHFWS Haveri Recruitment 2026 – ಪ್ರಮುಖ ದಿನಾಂಕಗಳು (important dates)
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 05-11-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-12-2026
(ಒಂದು ವೇಳೆ ಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೋಟಿಫಿಕೇಶನ್ ಲಿಂಕ್ ಡೌನ್ಲೋಡ್ ಆಗದಿದ್ದರೆ ನಮ್ಮ ವಾಟ್ಸಪ್ ನಂಬರ್ 8050798925 ಈ ನಂಬರಿಗೆ ಮೆಸೇಜ್ ಮಾಡಿ)
DHFWS Haveri Recruitment 2026 – ಪ್ರಮುಖ ಲಿಂಕ್ ಗಳು (Important Links)
| Official wedsite | Click |
| Notification Link | Click |
| Telegram Join Link | Click |
| WhatsApp channel | Click |
| App Link | Click |
ಮುಖ್ಯವಾದ ಮಾಹಿತಿ:
ಪ್ರಿಯ ಸ್ನೇಹಿತರೆ, ನಾವು ನೀಡಿರುವ ಈ ಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಈ ಉದ್ಯೋಗದ ಮಾಹಿತಿ ಇಷ್ಟವಾಗಿದ್ದರೆ ದಯವಿಟ್ಟು ಮಾಹಿತಿ ಓದಿ ಸುಮ್ಮನಾಗಬೇಡಿ ಆದಷ್ಟು ಈ ಮಾಹಿತಿಯನ್ನ ಇತರರೊಂದಿಗೆ ಹಂಚಿಕೊಳ್ಳಿ ಇದು ಇನ್ನೊಬ್ಬರ ಭವಿಷ್ಯವನ್ನು ರೂಪಿಸುವ ಮಾಹಿತಿಯಾಗುತ್ತದೆ. ಹಾಗೆ ಈ ಮಾಹಿತಿ ಇಷ್ಟವಾಗಿದ್ದರೆ ನಿಮ್ಮ Facebook group ಮತ್ತು WhatsApp group ಹಾಗೂ telegram ಮೂಲಕ ಹಂಚಿಕೊಳ್ಳಿ.

Hello friends, my name is Basavaraj. I am the writer and founder of this blog. I share all the information related to Central government jobs, State government jobs, and government schemes through this website.