BMRCL ASO Recruitment 2026: ನಮ್ಮ ಮೆಟ್ರೋದಲ್ಲಿ 50 ಹುದ್ದೆಗಳಿಗೆ ಅರ್ಜಿ ಆಹ್ವಾನ | ಮಾಸಿಕ ₹32,950 ವೇತನ
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಇಲಾಖೆಯ ನೇಮಕಾತಿ 2026 ಕಾಲಿ ಇರುವ ಸಹಾಯಕ ಭದ್ರತಾ ಅಧಿಕಾರಿ (Assistant security officer) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 32,950 ವೇತನವನ್ನು ಪ್ರತಿ ತಿಂಗಳಾಗಿ ನೀಡಲಾಗುತ್ತದೆ. 5 ನವಂಬರ್ 2026 ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿದ್ದು ಯಾರೂ ಸಹ ಈ ಅವಕಾಶವನ್ನು ಮಿಸ್ ಮಾಡಿಕೊಳ್ಳದೆ ಅರ್ಜಿಯನ್ನು ಸಲ್ಲಿಸಿ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಇಲಾಖೆಯ ಹುದ್ದೆಗಳಿಗೆ ಸಂಬಂಧಿಸಿದ ಇನ್ನಿಷ್ಟು ಹೆಚ್ಚಿನ ಮಾಹಿತಿಯಾದ ಶೈಕ್ಷಣಿಕ ವಿದ್ಯಾರ್ಹತೆ/ ಆಯ್ಕೆ ವಿಧಾನ/ಪ್ರಮುಖ ದಿನಾಂಕಗಳು ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.
BMRCL ASO Recruitment 2026 – ಪ್ರಮುಖ ವಿವರಣೆ (Overview)
ನೇಮಕಾತಿ ಇಲಾಖೆ ಹೆಸರು:
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL Recruitment 2026)
ಹುದ್ದೆಗಳ ಹೆಸರು:
1. ಸಹಾಯಕ ಭದ್ರತಾ ಅಧಿಕಾರಿ
ಒಟ್ಟು ಹುದ್ದೆಗಳ ಸಂಖ್ಯೆ:
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಇಲಾಖೆಯಲ್ಲಿ ಒಟ್ಟು 50 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳು ನಮ್ಮ ಕರ್ನಾಟಕದಲ್ಲಿ ಖಾಲಿ ಇರುವುದರಿಂದ ಆಸಕ್ತಿ ಹಾಗೂ ಅರ್ಹತೆ ಪಡೆದ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಉದ್ಯೋಗದ ಸ್ಥಳ: [ Bengaluru ]
Also Read 📢 : ಬೆಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಅವಕಾಶ! 3 Vacancies | Walk-in Interview
BMRCL ASO Recruitment 2026 – ಸಂಬಳದ ಮಾಹಿತಿ (Salary Details)
ವೇತನ ಶ್ರೇಣಿ:
60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ: ಪ್ರತಿ ತಿಂಗಳಿಗೆ ₹32,950/- 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ: ಪ್ರತಿ ತಿಂಗಳಿಗೆ ₹30,000/-
ಮುಖ್ಯ ಸೂಚನೆ:
ನಾವು ನೀಡುವ ಪ್ರತಿಯೊಂದು ಉದ್ಯೋಗದ ಮಾಹಿತಿಯು ಉಚಿತವಾಗಿದ್ದು ನಾವು ನೀಡುವ ಮಾಹಿತಿಗೆ ಯಾವುದೇ ರೀತಿಯ ಹಣವನ್ನು ಕೇಳುವುದಿಲ್ಲ. jobsexplain.com ಈ website ಕರ್ನಾಟಕದ ಅಭ್ಯರ್ಥಿಗಳಿಗೆ ಹಾಗೂ ಉದ್ಯೋಗ ಬಯಸುವ ವಿದ್ಯಾರ್ಥಿಗಳಿಗೆ ಉಚಿತವಾದ ಉದ್ಯೋಗ ಮಾಹಿತಿ ನೀಡುವ website. ಒಂದು ವೇಳೆ ನಮ್ಮ ಹೆಸರಿನಲ್ಲಿ ಯಾರಾದರೂ ಹಣ ಪಾವತಿ ಮಾಡಲು ನಿಮಗೆ WhatsApp ಅಥವಾ Instagram ಮುಂತಾದ ಸೋಶಿಯಲ್ ಪ್ಲಾಟ್ಫಾರ್ಮ್ಗಳ ಮೂಲಕ ಹಣ ಪಾವತಿ ಮಾಡಲು ಹೇಳಿದರೆ ದಯವಿಟ್ಟು ಹಣವನ್ನು ನೀಡಬೇಡಿ. ಈ ಕುರಿತು ನಮಗೆ ತಿಳಿಸಿ ನಮ್ಮ ವಾಟ್ಸಾಪ್ ನಂಬರ್ : 8050798925 ಹೆಚ್ಚಿನ ಮಾಹಿತಿಗಾಗಿ ವಾಟ್ಸಾಪ್ ಮೂಲಕ ನಮ್ಮನ್ನು ಸಂಪರ್ಕಿಸಿ ಹಾಗೂ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮುಂಚೆ ನಾವು ಕೆಳಗಡೆ ನೀಡಿರುವ ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಸ್ಪಷ್ಟವಾಗಿ ಓದಿ ತದನಂತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.
BMRCL ASO Recruitment 2026 – ಶೈಕ್ಷಣಿಕ ಅರ್ಹತೆಗಳು (Qualification)
ಶೈಕ್ಷಣಿಕ ವಿದ್ಯಾರ್ಹತೆ:
• ಭಾರತೀಯ ಸೇನೆ (Army), ನೌಕಾಪಡೆ (Navy), ವಾಯುಪಡೆ (Air Force), ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ, CAPF, CRPF, BSF, CISF ಹಾಗೂ ತತ್ಸಮಾನ ಸೇವೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತರಾದ ಸಿಬ್ಬಂದಿಗಳು ಅರ್ಜಿ ಸಲ್ಲಿಸಬಹುದು.
• ರಕ್ಷಣಾ ಸೇವೆಗಳಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ (JCO) ಅಥವಾ ತತ್ಸಮಾನ ಹುದ್ದೆ ಹೊಂದಿರಬೇಕು.
• ಅಥವಾ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಇನ್ಸ್ಪೆಕ್ಟರ್ / ಸಬ್-ಇನ್ಸ್ಪೆಕ್ಟರ್ (SI) / ಎಎಸ್ಐ (ASI) ಅಥವಾ ತತ್ಸಮಾನ ಶ್ರೇಣಿಯಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು.
• 31.12.2026 ರಂದು ಅಥವಾ ಅದಕ್ಕೂ ಮುನ್ನ ನಿವೃತ್ತರಾಗಲಿರುವ ಹಾಲಿ ಮಿಲಿಟರಿ ಸಿಬ್ಬಂದಿಯೂ ಸಹ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
• ಭಾಷಾ ಜ್ಞಾನ: ಕನ್ನಡ ಭಾಷೆಯ ಜ್ಞಾನ ಕಡ್ಡಾಯವಾಗಿದೆ.
BMRCL ASO Recruitment 2026 – ವಯೋಮಿತಿ ವಿವರಣೆ (Age Limit)
ವಯೋಮಿತಿ:
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 21 ಗರಿಷ್ಠ ವಯೋಮಿತಿ 62 ವರ್ಷ ನಿಗದಿಪಡಿಸಲಾಗಿರುತ್ತದೆ. ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲಾಖೆಯ ಅಧಿಕೃತ ಅಧಿಸೂಚನೆ ಗಮನಿಸಿ.
ವಯೋಮಿತಿ ಸಡಿಲಿಕೆ ವಿವರಣೆ:
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಇಲಾಖೆಯ ನಿಯಮಗಳ ಅನ್ವಯ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ಬೇಕಾದಲ್ಲಿ ನಾವು ನೀಡಿರುವ ಅಧಿಸೂಚನೆಯನ್ನು ಗಮನಿಸಿ.
BMRCL ASO Recruitment 2026 – ಅರ್ಜಿ ಶುಲ್ಕ (Application Fee)
ಅರ್ಜಿ ಶುಲ್ಕ:
• ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: 00/-
• 2A/2B/3A/3B ವರ್ಗದ ಅಭ್ಯರ್ಥಿಗಳಿಗೆ: 00/-
• ಪರಿಶಿಷ್ಟ ಜಾತಿ ಹಾಗೂ ಪಂಗಡ ಅಭ್ಯರ್ಥಿಗಳಿಗೆ: 00/-
• ಅಂಗವಿಕಲ ಅಭ್ಯರ್ಥಿಗಳಿಗೆ: 00/
BMRCL ASO Recruitment 2026 – ಆಯ್ಕೆ ವಿಧಾನ (Selection Process)
ಆಯ್ಕೆ ವಿಧಾನ:
ದೈಹಿಕ ಸಾಮರ್ಥ್ಯ ಪರೀಕ್ಷೆ (Physical Fitness Test – PFT):
1. ಅಭ್ಯರ್ಥಿಗಳು ವಯಸ್ಸಿನ ಗುಂಪಿಗೆ ಅನುಗುಣವಾಗಿ 1.5 ಕಿ.ಮೀ ಓಟವನ್ನು 10 ರಿಂದ 11.30 ನಿಮಿಷಗಳ ಒಳಗೆ ಪೂರ್ಣಗೊಳಿಸಬೇಕು.
2. ಸರ್ಕಾರಿ ಆಸ್ಪತ್ರೆಯಿಂದ ಪಡೆದ ಮೆಡಿಕಲ್ ಫಿಟ್ನೆಸ್ ಪ್ರಮಾಣಪತ್ರವನ್ನು ತರುವುದು ಕಡ್ಡಾಯ
ಲಿಖಿತ ಪರೀಕ್ಷೆ (Written Test):
1. ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ 1 ಗಂಟೆಯ ಲಿಖಿತ ಪರೀಕ್ಷೆ ಇರುತ್ತದೆ.
2. ಇದು ಕನ್ನಡ/ಇಂಗ್ಲಿಷ್ ಭಾಷೆಯಲ್ಲಿ ಪ್ರಬಂಧ ರಚನೆ (Essay Writing) ಮತ್ತು ಸಾಮಾನ್ಯ ಜ್ಞಾನ (General Knowledge) ಒಳಗೊಂಡಿರುತ್ತದೆ.
ಸಂದರ್ಶನ
BMRCL ASO Recruitment 2026 – Online ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? (How to Apply)
ಅರ್ಜಿ ಸಲ್ಲಿಸುವ ವಿಧಾನ:
- ಅಭ್ಯರ್ಥಿಗಳು BMRCL ನ ಅಧಿಕೃತ ವೆಬ್ಸೈಟ್ www.bmrc.co.in ಗೆ ಭೇಟಿ ನೀಡಿ “Careers” ವಿಭಾಗದಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
- ಆನ್ಲೈನ್ ಅರ್ಜಿ ಸಲ್ಲಿಸಿದ ನಂತರ ಅರ್ಜಿಯ ಪ್ರಿಂಟ್ಔಟ್ (Printout) ತೆಗೆದುಕೊಂಡು ಸಹಿ ಮಾಡಬೇಕು.
- ಪ್ರಿಂಟ್ಔಟ್ ಜೊತೆಗೆ ಅಗತ್ಯ ಸ್ವಯಂ-ದೃಢೀಕೃತ (Self-attested) ದಾಖಲೆಗಳನ್ನು (ವಯಸ್ಸಿನ ಪುರಾವೆ, ಶೈಕ್ಷಣಿಕ ದಾಖಲೆಗಳು, ಅನುಭವ ಪತ್ರ, PPO & ಡಿಸ್ಚಾರ್ಜ್ ಪ್ರಮಾಣಪತ್ರ, ಮೆಡಿಕಲ್ ಫಿಟ್ನೆಸ್ ಸರ್ಟಿಫಿಕೇಟ್ ಇತ್ಯಾದಿ) ಲಗತ್ತಿಸಬೇಕು.
- ಲಕೋಟೆಯ ಮೇಲೆ “APPLICATION FOR THE POST OF ASSISTANT SECURITY OFFICER“ ಎಂದು ಬರೆದು, ಸ್ಪೀಡ್ ಪೋಸ್ಟ್ ಅಥವಾ ಕೊರಿಯರ್ ಮೂಲಕ ನಿಗದಿತ ವಿಳಾಸಕ್ಕೆ ಕಳುಹಿಸಬೇಕು.
ಅರ್ಜಿ ಕಳುಹಿಸಬೇಕಾದ ವಿಳಾಸ: Dy. General Manager (HR), Bangalore Metro Rail Corporation Limited, III Floor, BMTC Complex, K.H. Road, Shanthinagar, Bengaluru – 560 027
BMRCL ASO Recruitment 2026 – ಪ್ರಮುಖ ದಿನಾಂಕಗಳು (important dates)
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 08-10-2026
ಆನ್ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 31/10/2026
ಭರ್ತಿ ಮಾಡಿದ ಅರ್ಜಿಯ ಹಾರ್ಡ್ ಕಾಪಿ (ಪ್ರಿಂಟ್ಔಟ್) ತಲುಪಲು ಕೊನೆಯ ದಿನಾಂಕ: 05/11/2026 (ಸಂಜೆ 04:00 ಗಂಟೆಯೊಳಗೆ)
(ಒಂದು ವೇಳೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಇಲಾಖೆಯ ನೋಟಿಫಿಕೇಶನ್ ಲಿಂಕ್ ಡೌನ್ಲೋಡ್ ಆಗದಿದ್ದರೆ ನಮ್ಮ ವಾಟ್ಸಪ್ ನಂಬರ್ 8050798925 ಈ ನಂಬರಿಗೆ ಮೆಸೇಜ್ ಮಾಡಿ)
BMRCL ASO Recruitment 2026 – ಪ್ರಮುಖ ಲಿಂಕ್ ಗಳು (Important Links)
| Apply Link | Click |
| Notification Link | Click |
| Telegram Join Link | Click |
| WhatsApp channel | Click |
| App Link | Click |
ಮುಖ್ಯವಾದ ಮಾಹಿತಿ:
ಪ್ರಿಯ ಸ್ನೇಹಿತರೆ, ನಾವು ನೀಡಿರುವ ಈ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಇಲಾಖೆಯ ಈ ಉದ್ಯೋಗದ ಮಾಹಿತಿ ಇಷ್ಟವಾಗಿದ್ದರೆ ದಯವಿಟ್ಟು ಮಾಹಿತಿ ಓದಿ ಸುಮ್ಮನಾಗಬೇಡಿ ಆದಷ್ಟು ಈ ಮಾಹಿತಿಯನ್ನ ಇತರರೊಂದಿಗೆ ಹಂಚಿಕೊಳ್ಳಿ ಇದು ಇನ್ನೊಬ್ಬರ ಭವಿಷ್ಯವನ್ನು ರೂಪಿಸುವ ಮಾಹಿತಿಯಾಗುತ್ತದೆ. ಹಾಗೆ ಈ ಮಾಹಿತಿ ಇಷ್ಟವಾಗಿದ್ದರೆ ನಿಮ್ಮ Facebook group ಮತ್ತು WhatsApp group ಹಾಗೂ telegram ಮೂಲಕ ಹಂಚಿಕೊಳ್ಳಿ.

Hello friends, my name is Basavaraj. I am the writer and founder of this blog. I share all the information related to Central government jobs, State government jobs, and government schemes through this website.